ಕುಂದಗೋಳ ಲೋಕ ಅದಾಲತ್‌ ಭರ್ಜರಿ ಯಶಸ್ಸು 111 ಪ್ರಕರಣಗಳಿಗೆ ಸುಖಾಂತ್ಯ

ಹುಬ್ಬಳ್ಳಿ: ಕುಂದಗೋಳ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 111 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡಿದ್ದು, ಅನೇಕ ವ್ಯಾಜ್ಯಗಳಿಗೆ ಸುಖಾಂತ್ಯ ಸಿಕ್ಕಿದೆ.

ಹಿರಿಯ ದಿವಾಣಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಅವರು, ರಾಜಿ ಸಂಧಾನದ ಮೂಲಕ 55 ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಿವಿಲ್ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿಯವರು 56 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಈ ವೇಳೆ, ವಿಚ್ಛೇದಿತ ದಂಪತಿಗಳಿಗೆ ಪುನ‌ರ್ ವಿವಾಹ ಮಾಡಿಸಿದ್ದು, ಅಶಕ್ತ ವಯೋವೃದ್ಧರ ಪ್ರಕರಣವನ್ನು ನ್ಯಾಯಾಲಯದ ಹೊರಗಡೆ ಕಾರಿನಲ್ಲೇ ಹೋಗಿ ಆಲಿಸುವ ಮೂಲಕ ಲೋಕ ಅದಾಲತ್‌ನ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದರು.

ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಒಟ್ಟು 57,50,347 ರೂಪಾಯಿಗಳ (ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 34,44,269 ರೂ. ಮತ್ತು ಸಿವಿಲ್ ನ್ಯಾಯಾಲಯದಲ್ಲಿ 23,06,078 ರೂ.) ಮೊತ್ತವನ್ನು ಪರಿಗಣಿಸಲಾಯಿತು.

Leave a Reply

Your email address will not be published. Required fields are marked *