ಪುನೀತ್ ಅಪ್ಪಟ ಅಭಿಮಾನಿ ರಾಘು ವದ್ದಿ ಅವರ ಅಪ್ಪು ಬೆಣ್ಣೆ ದೋಸೆ ಹೋಟೆಲ್ ನಲ್ಲಿ ದಿನವೀಡಿ ಉಚಿತವಾಗಿ ಬೆಣ್ಣೆ ದೋಸೆ ಹಂಚಲಾಯಿತುಹುಬ್ಬಳ್ಳಿ: ದಿಗಂತ ನಟ ಪುನೀತ್ ರಾಜಕುಮಾರ 51 ನೇ ಜನ್ಮದಿನವನ್ನು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಮತ್ತು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಪುನೀತ್ ಅಪ್ಪಟ ಅಭಿಮಾನಿ ರಾಘು ವದ್ದಿ ಅವರ ಅಪ್ಪು ಬೆಣ್ಣೆ ದೋಸೆ ಹೋಟೆಲ್ ನಲ್ಲಿ ದಿನವೀಡಿ ಉಚಿತವಾಗಿ ಬೆಣ್ಣೆ ದೋಸೆ ಹಂಚಲಾಯಿತು. ಮೂರುಸಾವಿರ ಮಠದ ಎದರುಗಡೆ ಇರುವ ಹೋಟೆಲ್ ನಲ್ಲಿ ಹಸಿದು ಬಂದವರಿಗ ಹಾಗೂ ಸಾವಿರಾರು ಅಪ್ಪು ಅಭಿಮಾನಿಗಳಿ ಬೆಣ್ಣೆ ದೋಸೆ ಉಣಬಡಿಸಲಾಯಿತು. ಮತ್ತೊಂದು ಕಡೆ 50ಕ್ಕೂ ಹೆಚ್ಚು ಅಭಿಮಾನಿಗಳು ರಕ್ತ ದಾನ ಸಹ ಮಾಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.ಜೈ ರಾಜವಂಶ ಅಭಿಮಾನಿ ಸಂಘ, ರಾಘು ವದ್ದಿ ಸ್ನೇಹಿತರು, ಪ್ರತಿ ವರ್ಷ ಅಪ್ಪು ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಿಕೊಂಡ ಬಂದಿದ್ದು, ಈ ವರ್ಷ ಗ್ಯಾಸ್ ಸಮಸ್ಯೆಯಿಂದ ಊಟಕ್ಕೆ ಪರದಾಡುತ್ತಿರುವವರಿಗೆ ನೇರವಾಗಿ, ಅಪ್ಪುವಿಗೆ ಶುಭಕೋರಿದ್ದಾರೆ..
ದಿವಂಗತ ನಟ ಪುನೀತ್ ರಾಜಕುಮಾರ 51 ನೇ ಜನ್ಮದಿನವನ್ನು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಮತ್ತು ಅರ್ಥ ಪೂರ್ಣವಾಗಿ ಆಚರಿಸಲಾಯಿತು.










Leave a Reply