ರೇಲ್ವೆ ಇಲಾಖೆಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅವಕಾಶಕ್ಕಾಗಿ ಕನ್ನಡಪರ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ನೈರುತ್ಯ ರೇಲ್ವೆ ಇಲಾಖೆ ವಿಭಾಗ ಕೊನೆಗೂ ಮಣಿದಿದೆ

ಸದ್ಯ ನಡೆಯುತ್ತಿರುವ ಪರೀಕ್ಷೆಗಳನ್ನು ರದ್ದು ಮಾಡಿ, ಮುಂದೂಡಿಕೆ ಮಾಡಿ ಆರ್‌ಆರ್‌ಸಿ ಚೇರ್ಮನ್ ಅನ್ಸಾರಿ ಆದೇಶ ಹೊರಡಿಸಿದ್ದಾರೆ. ಹುಬ್ಬಳ್ಳಿ: ರೇಲ್ವೆ ಇಲಾಖೆಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅವಕಾಶಕ್ಕಾಗಿ ಕನ್ನಡಪರ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ನೈರುತ್ಯ ರೇಲ್ವೆ ಇಲಾಖೆ ವಿಭಾಗ ಕೊನೆಗೂ ಮಣಿದಿದೆ.ಸದ್ಯ ನಡೆಯುತ್ತಿರುವ ಪರೀಕ್ಷೆಗಳನ್ನು ರದ್ದು ಮಾಡಿ, ಮುಂದೂಡಿಕೆ ಮಾಡಿ ಆರ್‌ಆರ್‌ಸಿ ಚೇರ್ಮನ್ ಅನ್ಸಾರಿ ಆದೇಶ ಹೊರಡಿಸಿದ್ದಾರೆ. ಇದರಿಂದ ಈಗಾಗಲೇ ಪರೀಕ್ಷೆ ಕೇಂದ್ರಗಳನ್ನು ಪ್ರವೇಶ ಮಾಡಿದ್ದ ಆಕಾಂಕ್ಷಿಗಳು ಯಾವುದೇ ಪರೀಕ್ಷೆ ಬರೆಯದೆ, ಕೇಂದ್ರದಿಂದ ವಾಪಸಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪರೀಕ್ಷಾ ಮುಖ್ಯಾಧಿಕಾರಿ ತಿರುಮಲರೆಡ್ಡಿ ಮಾತನಾಡಿ,ಸದ್ಯ ಇರುವ ಪರೀಕ್ಷೆಗಳನ್ನು ಮುಂದೂಡಲಾಗಿದೆ.ಮುಂದಿನ ಪರೀಕ್ಷೆ ದಿನಾಂಕ ಬಳಿಕ ತಿಳಿಸುತ್ತೆವೆ,ಕನ್ನಡದಲ್ಲಿ ಪರೀಕ್ಷೆ ಬಗ್ಗೆ ನಿರ್ಧಾರ ವನ್ನು ಮೇಲಾಧಿಕಾರಿಗಳು ತಗೋತಾರೆಈ ಬಗ್ಗೆ ಜಿಎಂ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತದೆಂದರು..

Leave a Reply

Your email address will not be published. Required fields are marked *