ಎಲ್ ಪಿಜಿ ಕೊರತೆಯಿಂದ ಪ್ರತಿಷ್ಠಿತ ಮತ್ತು ಹಳೇ ಹೋಟೆಲ್ ಗಳು ಬಾಗಿಲು ಹಾಕುತ್ತಿವೆ
-ಇನ್ನೂ ಕೆಲಸ ಇಲ್ಲದ ಹಿನ್ನೆಲೆ ಕಾರ್ಮಿಕರು ಸಹ ಹೋಟೆಲ್ ಕೆಲಸ ಬಿಟ್ಟು ಬೇರೆಕಡೆ ಜಂಪ್ ಆಗುತ್ತಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡದಲ್ಲಿ ಎಲ್ ಪಿಜಿ ಗ್ಯಾಸ್ ಅಭಾವ ಸಾಕಷ್ಟು ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಎಲ್ ಪಿಜಿ ಕೊರತೆಯಿಂದ ಪ್ರತಿಷ್ಠಿತ ಮತ್ತು ಹಳೇ ಹೋಟೆಲ್ ಗಳು ಬಾಗಿಲು ಹಾಕುತ್ತಿವೆ. ಇನ್ನೂ ಕೆಲಸ ಇಲ್ಲದ ಹಿನ್ನೆಲೆ ಕಾರ್ಮಿಕರು ಸಹ ಹೋಟೆಲ್ ಕೆಲಸ ಬಿಟ್ಟು ಬೇರೆಕಡೆ ಜಂಪ್ ಆಗುತ್ತಿದ್ದಾರೆ.
ಇದು ಹೋಟೆಲ್ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಗ್ಯಾಸ್ ಬಳಕೆ ಹೊಂದಿಕೊಂಡಿರುವ ಹೊಟೇಲ್ ಗಳು ಇವರು ಸ್ಥಳದಲ್ಲಿಯೇ ಸೌದೆ ಒಲೆಗಳು ಬಳಸಿ ಅಡುಗೆ ತಯಾರು ಮಾಡುತ್ತಿದ್ದಾರೆ. ಒಂದು ಕಡೆ ಗ್ರಾಹಕರು, ಕಾರ್ಮಿಕರನ್ನು ಹಾಗೂ ಹೊಟೇಲ್ ಪ್ರತಿಷ್ಠಿತೆಯನ್ನ ಕಳೆದುಕೊಳ್ಳುವ ಭೀತಿ ನಿರ್ಮಾಣವಾಗಿದೆ. ಇನ್ನೂ ಹುಬ್ಬಳ್ಳಿ ಕೇಶ್ವಾಪುರದಲ್ಲಿರುವ ಸರ್ವೋದಯ ಹೋಟೆಲ್ ಅತ್ಯಂತ ಹಳೆಯ ಹೊಟೇಲ್ ಆಗಿದ್ದು, ಇದು ಸರ್ವೋದಯ ಸರ್ಕಲ್ ಅಂತಲೇ ಲ್ಯಾಂಡ್ ಮಾರ್ಕ್ ಆಗಿದೆ.ಈಗ ಈ ಹೋಟೆಲ್ ಮುಚ್ಚುವ ಹಂತಕ್ಕೆ ತಲುಪಿದೆ.









Leave a Reply