Advertisement

ಪೆರ್ಮುದೆ ಬಳಿ ಸ್ಕೂಟರ್ – ಬೈಕ್ ಪರಸ್ಪರ ಡಿಕ್ಕಿ: ಯುವಕನ ದಾರುಣ ಸಾವು, ತಂದೆಗೆ ಗಂಭೀರ ಗಾಯ

[ad_1]

ಕುಂಬಳೆ (ಮೇ 28): ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಪೆರಿಯಡ್ಕದಲ್ಲಿ ಇಂದು ಬೆಳಿಗ್ಗೆ ಸ್ಕೂಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಬಾಯಾರು ಚಿಪ್ಪಾರು ನೆತ್ತರಗುಳಿ ನಿವಾಸಿ ಎನ್. ಕಿಶನ್ (25) ಮೃತ ವ್ಯಕ್ತಿಯಾಗಿದ್ದಾರೆ.

ಇವರೊಂದಿಗಿದ್ದ ಸಹ ಸವಾರ, ಮೃತರ ತಂದೆ ಮಾಧವ ದೇವಾಡಿಗ (55) ಎಂಬವರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

ಕಿಶನ್ ಚಲಾಯಿಸುತ್ತಿದ್ದ ಸ್ಕೂಟರ್ ಮತ್ತು ಮುಂಭಾಗದಿಂದ ಬಂದ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತೆನ್ನಲಾಗಿದೆ.



[ad_2]

Source link

Leave a Reply

Your email address will not be published. Required fields are marked *