ಮಂಗಳೂರು ಎಸ್ ಡಿಎಂ ಕಾಲೇಜು ತಂಡ ಚಾಂಪಿಯನ್
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಹಯೋಗದೂಂದಿಗೆ ಜೆ.ಎಸ್.ಎಸ್. ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಅಂತರ ಕಾಲೇಜು ವ್ಹಾಲಿಬಾಲ್ ಮಹಿಳಾ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕಿ ಕರಿಮುನ್ನಿಸಾ ಸೈಯದ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಮುಖ್ಯ, ಉತ್ತಮ ದೈಹಿಕ ಆರೋಗ್ಯವಿದ್ದಲ್ಲಿ ಮಾತ್ರ ಮನಸ್ಸು ಶಾಂತ ಮತ್ತು ಕ್ರಿಯಾಶೀಲವಾಗಿರುತ್ತದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ. ರೂಪಾ ಇಂಗಳಹಳ್ಳಿ, ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಕ್ರೀಡೆ ಅತೀ ಮುಖ್ಯ ಎಂದರು.
ಸಂಜೆ ನಡೆದ ಸಮಾರೋಪದಲ್ಲಿ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಇಂದಿನ ಕಾಲದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮಿಂಚುತ್ತಿದ್ದು, ಕ್ರೀಡೆ ಅವರಲ್ಲಿ ಆತ್ಮಸ್ಥೆರ್ಯ, ಧೈರ್ಯ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಪಠ್ಯದ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಬೇಕೆಂದು ತಿಳಿಸಿದರು
ಪಂದ್ಯಾವಳಿಯಲ್ಲಿ ಕರ್ನಾಟಕದ 15 ಕಾನೂನು ಮಹಾವಿದ್ಯಾಲಯಗಳು ಭಾಗವಹಿಸಿದ್ದು. ಪ್ರಥಮ ಸ್ಥಾನವನ್ನು ಮಂಗಳೂರಿನ ಎಸ್ಡಿಎಂ ಕಾನೂನು ಮಹಾವಿದ್ಯಾಲಯ, ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜು ದ್ವಿತೀಯ, ಬೆಂಗಳೂರಿನ ಕ್ಟಿಸ್ಟು ಜಯಂತಿ ಕಾನೂನು ಮಹಾವಿದ್ಯಾಲಯ ತೃತೀಯ ಮತ್ತು ಬಿಎಂಎಸ್ ಕಾನೂನು ಕಾಲೇಜು ನಾಲ್ಕನೇ ಸ್ಥಾನ ಗಳಿಸಿವೆ.
ಕಾನೂನು ವಿವಿ ದೈಹಿಕ ಶಿಕ್ಷಣ ಶಿಕ್ಷಕ ಡಾ. ಖಾಲೀದ್ ಖಾನ್, ಸಕ್ರಿ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಕಾರ್ಯಕ್ರಮ ಸಂಯೋಜಕ ಸುರೇಶ ಲಿಂಬಿಕಾಯಿ, ಪ್ರೊ. ಬಾಬುಲಾಲ್ ದರಗದ, ಡಾ. ದೀಪಾ ಪಾಟೀಲ, ಶೈಲಜಾ ಹಗೇದಾಳ, ಸತೀಶ ಸಿ.ವಿ., ಸುರೇಶ ಲಮಾಣಿ, ಪರಸಪ್ಪ ಮಾಂಗ, ಉಪಸ್ಥಿತರಿದ್ದರು.

















Leave a Reply