[ad_1]
1
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಕ್ಷಣಗಣನೆ ಶುರುವಾಗಿದೆ. ಅಲ್ಲದೆ ಡಿ.ಕೆ. ಶಿವಕುಮಾರ್ ಅವರ ಕ್ಯಾಬಿನೆಟ್ ರಚನೆಗೆ ತೀವ್ರ ಕುತೂಹಲ ಹೆಚ್ಚಾಗಿದೆ. ಹಾಗಿದ್ರೆ ಡಿಕೆಶಿ ಸರ್ಕಾರದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ?


ಡಿ.ಕೆ. ಶಿವಕುಮಾರ್ ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಟೀಮ್‌ನಲ್ಲಿ ಎನ್.ಎ. ಹ್ಯಾರಿಸ್, ರಾಮಲಿಂಗ ರೆಡ್ಡಿ, ರಿಜ್ವಾನ್ ಅರ್ಷದ್, ಆನೇಕಲ್ ಶಿವಣ್ಣ, ಮಳವಳ್ಳಿ ನರೇಂದ್ರ ಸ್ವಾಮಿ, ಮಾಗಡಿ ಬಾಲಕೃಷ್ಣ, ಚಲುವರಾಯಸ್ವಾಮಿ, ತನ್ವೀರ್ ಸೇಠ್, ಗುಬ್ಬಿ ಶ್ರೀನಿವಾಸ್, ಟಿ.ಬಿ. ಜಯಚಂದ್ರ, ನಾಗೇಂದ್ರ, ಶರತ್ ಬಚ್ಚೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ಕೆ.ಎಚ್. ಮುನಿಯಪ್ಪ, ರಘುಮೂರ್ತಿ, ಮಧು ಬಂಗಾರಪ್ಪ, ಸಂಗಮೇಶ್ ಮತ್ತು ಯಶವಂತರಾಯಗೌಡ ಪಾಟೀಲ್ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಡಿಸಿಎಂ ಸ್ಥಾನ ಯಾರಿಗೆ?
ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಯತೀಂದ್ರ ಸಿದ್ದರಾಮಯ್ಯ ಮತ್ತು ಯು.ಟಿ. ಖಾದರ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಸಿದ್ದರಾಮಯ್ಯ ಅವರ ಟೀಮ್‌ನಲ್ಲಿ ಹಿರಿಯ ನಾಯಕರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಡಿ.ಕೆ. ಶಿವಕುಮಾರ್ ಅವರು ತಮ್ಮ ಟೀಮ್‌ನಲ್ಲಿ ಯುವ ಮುಖಗಳಿಗೆ ಹೆಚ್ಚು ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನು ಇದುವರೆಗೂ ರಾಜ್ಯದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಎರಡು ಬಣಗಳು ಆಕ್ಟಿವ್ ಆಗಿದ್ದವು. ಕೆಲವರು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕೆಂದು ಪಟ್ಟು ಹಿಡಿದಿದ್ದರೆ ಮತ್ತೆ ಕೆಲವರು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಪಣತೊಟ್ಟಿದ್ದರು. ಹೀಗಾಗಿ ಸಿದ್ದು ಬಣದ ಕೆಲ ನಾಯಕರಿಗೆ ಡಿಕೆಶಿ ಶಾಕ್ ಕೊಡಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈಗ ಆಟ ಶುರುವಾಗಿದೆ.
[ad_2]
Source link


















Leave a Reply