Advertisement

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ವರ್ಗಾವಣೆ

[ad_1]

ಬೆಳ್ತಂಗಡಿ: ಸರಕಾರದ ಕಂದಾಯ ಇಲಾಖೆ ಒಟ್ಟು 27 ಮಂದಿ ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಕಳೆದ 2023 ನವಂಬರ್ 18 ರಿಂದ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಆಗಿದ್ದ ಪೃಥ್ವಿ ಸಾನಿಕಂ ಅವರನ್ನು ಮಂಗಳೂರು ನಗರದ ಮುಲ್ಕಿ ತಾಲೂಕಿಗೆ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಿ ಮೇ.27 ರಂದು ಆದೇಶ ಮಾಡಿದೆ.

ಬೆಳ್ತಂಗಡಿ ತಹಶೀಲ್ದಾರ್ ಆಗಿ ಎರಡು ಬಾರಿ ಪೃಥ್ವಿ ಸಾನಿಕಂ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ 18-11-2023 ರಿಂದ 27-05-2026 ವರೆಗೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಬೆಳ್ತಂಗಡಿ ತಾಲೂಕಿನ ಜನರಿಗೆ ಉತ್ತಮ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನೂ ಬೆಳ್ತಂಗಡಿ ತಾಲೂಕಿನ ಹೊಸ ತಹಶೀಲ್ದಾರ್ ಆಗಿ ಯಾರನ್ನು ಕೂಡ ನೇಮಕ ಮಾಡಿಲ್ಲ.

The post ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ವರ್ಗಾವಣೆ appeared first on Hosakananda.

[ad_2]

Source link

Leave a Reply

Your email address will not be published. Required fields are marked *