Advertisement

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿರುವ ಜೀಮ್ ಮಾಲೀಕರ ಹಾಗೂ ತರಬೇತುದಾರರ ಜೊತೆ ಸಭೆ ನಡೆಸಿದ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ್….

ಅನಾವಶ್ಯಕ ಜನರು ಜೀಮ್ ನಲ್ಲಿ ಇದ್ದರೆ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಗ್ಯಾರೆಂಟಿ…..

ಹುಬ್ಬಳ್ಳಿ ಧಾರವಾಡ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಜಿಮ್ ಗಳ ಮಾಲೀಕರು ಮತ್ತು ತರಬೇತುದಾರರ ಸಭೆಯನ್ನು ಇಂದು ದಿನಾಂಕ 06.04.2026 ರಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ಶ್ರೀ ಎನ್ ಶಶಿಕುಮಾರ್ IPS ರವರು ಕೈಗೊಂಡರು.

  • ಜಿಮ್ ತರಬೇತಿಗೆ ಮಹಿಳೆಯರು ಬಂದಲ್ಲಿ ಅವರಿಗೆ ಪ್ರತ್ಯೇಕವಾಗಿ ಮಹಿಳಾ ತರಬೇತಿದಾರರನ್ನೇ ಕಡ್ಡಾಯವಾಗಿ ನೇಮಿಸುವುದು,
    *ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮಗಳು 1963 ರಡಿಯಲ್ಲಿ ಎಲ್ಲಾ ಜಿಮ್ ಗಳು ಮಹಾನಗರ ಪಾಲಿಕೆಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿ ಲೈಸೆನ್ಸ್ ಪಡೆದಿರಬೇಕು
    *20 ಲಕ್ಷಕ್ಕೂ ಹೆಚ್ಚು ವಹಿವಾಟು ಮೀರಿದರೆ, GST ರಿಜಿಸ್ಟ್ರೇಷನ್ ಮಾಡಿಸುವುದು
    *ಜಿಮ್ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವುದು ಮತ್ತು ಕನಿಷ್ಠ 6 ತಿಂಗಳಗಳ ಡಿವಿಆರ್ ವಿಡಿಯೋ ಬ್ಯಾಕಪ್ ಇಟ್ಟುಕೊಳ್ಳುವುದು
    *ಜಿಮ್ ಗಳಲ್ಲಿ ಬರುವ ಮತ್ತು ಹೋಗುವ ಜನರ ರಿಜಿಸ್ಟರ್ ಇಟ್ಟುಕೊಳ್ಳುವುದು,
    *ಅನ್ಯ ವ್ಯಕ್ತಿಗಳು ಜಿಮ್ ತರಬೇತಿ ಮಾಡುವ ಮಹಿಳೆಯರ ಫೋಟೋ/ವಿಡಿಯೋಗಳನ್ನು ಅನುಮತಿಯಿಲ್ಲದೆ ತೆಗೆಯದಂತೆ ನಿರ್ಬಂಧ ವಿಧಿಸುವುದು
  • ಜಿಮ್ ತರಬೇತುದಾರ ಸಂಪೂರ್ಣ ಪೂರ್ವಾಪರ ತಿಳಿದುಕೊಂಡು ವಿವರ ಇಟ್ಟುಕೊಳ್ಳುವುದು
  • ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಕಮರ್ಷಿಯಲ್ ಟ್ಯಾಕ್ಸ್/GST ಇಲಾಖೆಗಳ ಅಗತ್ಯ ಅನುಮತಿಗಳನ್ನು ಪಡೆಯುವುದು
    ಸೇರಿದಂತೆ ಇನ್ನಿತರ ಸಲಹೆ ಸೂಚನೆಗಳನ್ನು ನೀಡಿ ಕಡ್ಡಾಯವಾಗಿ ಪಾಲಿಸಲು ತಿಳಿಸಿದರು.

ಸಭೆಯಲ್ಲಿ ಕು. ಶೃತಿ ಎನ್ ಎಸ್ IPS, DCP (L&O), ಶ್ರೀ ರವೀಶ್ ಸಿ ಆರ್ KSPS, DCP (C&T) ರವರು ಮತ್ತು ಕಿಮ್ಸ್ ಆಸ್ಪತ್ರೆಯ ನಿರ್ದೇಶಕರು, ಕಮರ್ಷಿಯಲ್ ಟ್ಯಾಕ್ಸ್, ಮಹಾನಗರ ಪಾಲಿಕೆ ಅಧಿಕಾರಿಗಳು, ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಅವಳಿ ನಗರಗಳ ಜಿಮ್ ಗಳ ಮಾಲೀಕರು ಮತ್ತು ತರಬೇತಿದಾರರು ಹಾಜರಿದ್ದರು.

Leave a Reply

Your email address will not be published. Required fields are marked *