ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಠಾಣೆ ASI ಸೇರಿ 12 ಜನ ಸಿಬ್ಬಂದಿಗೆ ರಣ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆಯನ್ನ PSI ನೇತ್ರಾವತಿ ನೀಡಿದ್ದಾರೆ. ಮದ್ಯಾಹ್ನ 2 ರಿಂದ 5ರವರೆಗೆ ರಣಬಿಸಿಲಿಲ್ಲಿ ಬಂದೂಕು ಹೊತ್ತು ನಿಲ್ಲುವ ಶಿಕ್ಷೆ ವಿಧಿಸಿ ಪಿಎಸ್‌ಐ ದರ್ಪ ತೋರಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಕಾರಣಕ್ಕೆ ಪೊಲೀಸರಿಗೆ ಕಠಿಣ ಶಿಕ್ಷೆ ಎಂದು ಹೇಳಲಾಗ್ತಿದೆ. ಬಿಸಿಲ ಶಿಕ್ಷೆ ಅನುಭವಿಸಿದ ಸಿಬ್ಬಂದಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು, ಹೊಳಲ್ಕೆರೆ ಆಸ್ಪತ್ರೆಯಲ್ಲಿ ಕೆಲ ಸಿಬ್ಬಂದಿ ಚಿಕಿತ್ಸೆ ಪಡೆದಿದ್ದಾರೆ. ಮೇಲಾಧಿಕಾರಿಗಳಿಗೆ ಸಿಬ್ಬಂದಿ ದೂರು ಹೇಳಿದ್ದು ಡಿವೈಎಸ್ಪಿ ಗಿರೀಶ್ ಗೌಡ ಅವರಿಗೆ ತನಿಖೆ ನಡೆಸಿ ವರದಿ ನೀಡಲು ಎಸ್ಪಿ ರಂಜಿತ್ ಬಂಡಾರು ಸೂಚನೆ ನೀಡಿದ್ದಾರೆ.
ಚಿಕ್ಕಜಾಜೂರು ಠಾಣೆ ಪೊಲೀಸ್ ಸಿಬ್ಬಂದಿಗೆ ರಣಬಿಸಿಲಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದ PSI ನೇತ್ರಾವತಿ..!!

















Leave a Reply