Advertisement

ಧಾರವಾಡ ಶಹರ ಹಾಗೂ ಬೇರೆ ಬೇರೆ ಕಡೆಗಳಲ್ಲಿ ದ್ವಿ-ಚಕ್ರವಾಹನ ಕಳ್ಳತನ ಮಾಡಿದ ಒಬ್ಬ ಆರೋಪಿತನ ಬಂಧನ.

ಧಾರವಾಡ ಶಹರ, ಹಾಗೂ ಇನ್ನೂ ಬೇರೆ ಬೇರೆ ಕಡೆಗಳಲ್ಲಿ ದ್ವೀ-ಚಕ್ರವಾಹನ ಕಳ್ಳತನ ಮಾಡಿದ ಒಬ್ಬನಿಗೆ ಧಾರವಾಡ ಶಹರ ಪೊಲೀಸ ಠಾಣೆಯ ಪೊಲೀಸರು ಬಂಧಿಸಿ, ಆರೋಪಿತನ ತಾಬಾದಿಂದ ಒಟ್ಟು 2,35,000/-ರೂ ಕಿಮ್ಮತ್ತಿನ ಒಟ್ಟು 7 ದ್ವೀಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

ಮಾನ್ಯ ಶ್ರೀ ಎನ್.ಶಶಿಕುಮಾರ ಪೊಲೀಸ ಆಯುಕ್ತರು ಹುಬ್ಬಳ್ಳಿ-ಧಾರವಾಡ ಹಾಗೂ ಮಾನ್ಯ ಶ್ರೀಮತಿ ಶೃತಿ,ಎನ್,ಎಸ್ ಡಿಸಿಪಿ [ಕಾವಸು] ಹುಬ್ಬಳ್ಳಿ-ಧಾರವಾಡ ಮತ್ತು ಮಾನ್ಯ ಶ್ರೀ ರವೀಶ್.ಸಿ.ಆ‌ರ್ ಡಿಸಿಪಿ [ಅವಸಂ] ಹುಬ್ಬಳ್ಳಿ-ಧಾರವಾಡ, ಮಾನ್ಯ ಶ್ರೀ ಪ್ರಶಾಂತ ಸಿದ್ದನಗೌಡ್ರ ಸಹಾಯಕ ಪೊಲೀಸ ಆಯುಕ್ತರು ಧಾರವಾಡ ಶಹರ ಉಪವಿಭಾಗ ಇವರುಗಳ ಮಾರ್ಗದರ್ಶನದಲ್ಲಿ ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ಗುರುನಾಥ ಚವ್ಹಾಣ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಜನರು, ಆರೋಪಿ ಶಿವಾನಂದ ತಂದೆ ಅರ್ಜುನ ಮಾನೆ ವಯಾ: 33 ವರ್ಷ ಜಾತಿ: ಹಿಂದೂ ಮರಾಠಾ ಉದ್ಯೋಗ: ಕೃಷಿ ಸಾ: ಕಮಲಾಪೂರ ದ್ಯಾಮವ್ವನಗುಡಿ ಓಣಿ ಧಾರವಾಡ ಈತನಿಗೆ ದಿನಾಂಕ : 08.04.2026 ໖ ພ ಧಾರವಾಡ ಶಹರ ಪೊಲೀಸ ಠಾಣಾ ಹದ್ದಿಯಲ್ಲಿ ಕಳ್ಳತನವಾಗಿದ್ದ ಎರಡು ದ್ವಿಚಕ್ರವಾಹನ ಹಾಗೂ ಧಾರವಾಡ ಉಪನಗರ ಪೊಲೀಸ್ ಠಾಣೆಯ ಹದ್ದಿಯಲ್ಲಿ ಕಳ್ಳತನವಾಗಿದ್ದ ಒಂದು ದ್ವಿಚಕ್ರ ವಾಹನ ಹಾಗೂ ಇನ್ನೂ ಬೇರೆ ಬೇರೆ ಕಡೆಗಳಲ್ಲಿ ಕಳ್ಳತನವಾಗಿದ್ದ 04 ವಾಹನಗಳು ಹೀಗೆ ಒಟ್ಟು 7 ದ್ವಿ-ಚಕ್ರವಾಹನಗಳು ಅಕಿ : 2,35,000/-ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡ ಧಾರವಾಡ ಶಹರ ಪೊಲೀಸ ಠಾಣೆಯ ಶ್ರೀ ಗುರುನಾಥ ಚವ್ಹಾಣ ಪೊಲೀಸ ಇನ್ಸಪೆಕ್ಷರ, ಆರ್.ಎಚ್.ನದಾಪ್‌ಪಿ.ಎಸ್.ಐ [ಅವಿ] ಮತ್ತು ಸಿಬ್ಬಂದಿ ಜನರಾದ ಸಿಬ್ಬಂದಿ ಜನರಾದ ಶ್ರೀ ಐ.ಪಿ.ಬುರ್ಜಿ ಸಿಎಚ್‌ಸಿ- 1828, ಶ್ರೀ ಆರ್ ಎಸ್ ಪಾಟೀಲ ಸಿಎಚ್‌ಸಿ-1716 ಶ್ರೀ ಡಿ.ಕೆ.ನದಾಪ್ ಸಿಪಿಸಿ-2658, ಶ್ರೀ ಪ್ರವೀಣ.ತಿರ್ಲಾಪೂರ ಸಿಪಿಸಿ-3104, ಶ್ರೀ ಸಂತೋಷ ಪೂಜಾರ ಸಿಪಿಸಿ-3362 ಶ್ರೀ ಬಿ.ಎಲ್.ಹನಮಣ್ಣವರ ಸಿಪಿಸಿ-3179, ಶ್ರೀ ಎಮ್.ಆರ್.ಜ್ಯಾಲಿ ಸಿಪಿಸಿ-3263 ಮತ್ತು ತಾಂತ್ರಿಕ ವಿಭಾಗದ ಎಮ್.ಎಸ್.ಚಿಕ್ಕಮಠ, ಆರ್.ಕೆ.ಭಡಂಕರ ಹಾಗೂ ಆರ್.ಎಸ್.ಗೋಮಪ್ಪನವರ ಇವರುಗಳಿಗೆ ಪೊಲೀಸ್ ಆಯುಕ್ತರಾದ ಶ್ರೀ ಎನ್.ಶಶಿಕುಮಾರ ಪೊಲೀಸ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ.

Leave a Reply

Your email address will not be published. Required fields are marked *