Advertisement

ದಾವಣಗೆರೆ: ಏರಿಕೆ ಕಾಣದ ಅಡಿಕೆ ದರ; ತಾಪಮಾನ ತುಸು ಇಳಿಕೆ » Dvgsuddi Kannada | online news portal

[ad_1]

ದಾವಣಗೆರೆ: ಜಿಲ್ಲೆಯ ರೈತರ ಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ಚೇರಿಕೆ ಕಾಣುತ್ತಿಲ್ಲ. ಕಳೆದ ಒಂದು ತಿಂಗಳಿಂದ ದರ ಮತ್ತು ಅಂತರ್ಜಲ ಕುಸಿದಿತ್ತು. ಆದರೆ, ಈಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ತಾಪಮಾನ ಕಡಿಮೆಯಾಗಿದೆ.ಕಳೆದ ಒಂದು ತಿಂಗಳಿಂದ‌ ಸತತ ಕುಸಿತ ಕಾಣುತ್ತಲೇ ಬರುತ್ತಿದೆ.‌ ಇಂದಿನ (ಮೇ 25) ಉತ್ತಮ ರಾಶಿ ಅಡಿಕೆ ದರ ಕ್ವಿಂಟಲ್ ಗೆ 54 ಸಾವಿರ ಇದೆ.

ದಾವಣಗೆರೆ: ಗೆಳೆಯನ ಬರ್ತ್ ಡೇ ಪಾರ್ಟಿಗೆ‌ ಹೋಗಿದ್ದ ಯುವಕನಿಗೆ ಚಾಕು ಇರಿತ

ಮೇ 25 ಚನ್ನಗಿರಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)

  • ಗರಿಷ್ಠ ಬೆಲೆ 54,069 ರೂ.
  • ಕನಿಷ್ಠ ಬೆಲೆ 40,000 ರೂ.
  • ಸರಾಸರಿ ಬೆಲೆ 52,234 ರೂ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ‌ ಮೇ 25ರಂದು ಉತ್ತಮ ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 54,069 ರೂ ರೂ. ಇದ್ದು, ಕನಿಷ್ಠ ಬೆಲೆ 40,000 ರೂ., ಸರಾಸರಿ ಬೆಲೆ 52,234 ರೂ.‌ಇದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ರೈತರು, ವ್ಯಾಪಾರಿಗಳು ರಾಶಿ ಅಡಿಕೆ ಸಂಗ್ರಹ ಮಾಡಿಕೊಂಡಿದ್ದು, ದರ ಏರಿಕೆಗೆ ಕಾಯುತ್ತಿದ್ದಾರೆ.

ದಾವಣಗೆರೆ: ದೇವಸ್ಥಾನ ಕಳವು ಪ್ರಕರಣದ ಆರೋಪಿಗಳ ಬಂಧನ; 1.50ಲಕ್ಷ ಮೌಲ್ಯದ ಬೆಳ್ಳಿ ಆಭರಣ ವಶ

ನಾಲ್ಕು ವರ್ಷಗಳ ಗರಿಷ್ಠ ದರ ಪಟ್ಟಿ

  • 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ
  • 2024 ಮೇ ತಿಂಗಳಲ್ಲಿ ಗರಿಷ್ಠ ದರ 55 ಸಾವಿರ
  • 2025 ಅಕ್ಟೋಬರ್ ‌ನಲ್ಲಿ ಗರಿಷ್ಠ ದರ 68,349 ರೂ.
  • 2026 ಜನವರಿ ಗರಿಷ್ಠ ದರ‌ ರೂ.59,299

2026 ಜನವರಿ ಕ್ವಿಂಟಲ್ ಅಡಿಕೆ ದರ 59,299 ರೂ. ಇತ್ತು. ಫೆಬ್ರವರಿ 56,119,ರೂ.ಗೆ ಏಕಾಏಕಿ‌ ಕುಸಿತ ಕಂಡಿದ್ದು, ಮಾರ್ಚ್ 55,500 ರೂ.ಗೆ ಮತ್ತಷ್ಟು‌ ಇಳಿಕೆ ಕಂಡಿತ್ತು. ಈಗ ಏಪ್ರಿಲ್ ನಲ್ಲಿ 55,799 ರೂ. ಇತ್ತು. ಈಗ ಮೇ ಮೊದಲ ವಾರ 56 ಸಾವಿರವಿದ್ದ ದರ, ಇವತ್ತು (ಮೇ 25) 54 ಸಾವಿರಕ್ಕೆ ಇಳಿದಿದೆ.

[ad_2]

Source link

Leave a Reply

Your email address will not be published. Required fields are marked *