[ad_1]
ದಾವಣಗೆರೆ: ಮೇ-2026ರ ಮಾಹೆಯಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಮೇ ಮತ್ತು ಜೂನ್ ತಿಂಗಳ ಪಡಿತರಕ್ಕಾಗಿ ಪ್ರತ್ಯೇಕವಾಗಿ ಬಯೋ ಪಡೆಯಲಾಗುತ್ತಿದೆ. ಆದರೆ, ಕೆಲವು ಪಡಿತರ ಚೀಟಿದಾರರು ಮೇ ತಿಂಗಳ ಬಯೋ ದೃಢೀಕರಣ ನೀಡಿದ್ದರೂ, ಜೂನ್ ತಿಂಗಳ ಬಯೋ ದೃಢೀಕರಣ ನೀಡಲು ಇನ್ನು ಬಾಕಿ ಇರುತ್ತದೆ. ಅಂತಹ ಪಡಿತರ ಚೀಟಿದಾರರ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರದರ್ಶಿಸಲಾಗಿದ್ದು, ಬಾಕಿ ಇರುವ ಫಲಾನುಭವಿಗಳು ಮೇ 31ರ ಒಳಗಾಗಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಬಯೋ ದೃಢೀಕರಣ ನೀಡಬೇಕು.
ದಾವಣಗೆರೆ: ತೀವ್ರ ಕುಸಿತ ಕಂಡ ರಾಶಿ ಅಡಿಕೆ ದರ
ಜೂನ್-2026ರ ಮಾಹೆಯಲ್ಲಿ ಕೇವಲ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಮೇ ಹಾಗೂ ಜೂನ್ ತಿಂಗಳ ಪ್ರತ್ಯೇಕ ಬಯೋ ಪಡೆದು ಪಡಿತರ ಹಂಚಿಕೆ ಮಾಡಲಾಗುವುದು. ಪ್ರತಿ ಬಿ.ಪಿ.ಎಲ್ ಪಡಿತರ ಚೀಟಿದಾರರ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು. ಅಂತ್ಯೋದಯ ಪಡಿತರ ಚೀಟಿಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು.
ಅಂತ್ಯೋದಯ ಪಡಿತರ ಚೀಟಿಯಲ್ಲಿ 1 ರಿಂದ 3 ಸದಸ್ಯರುಗಳನ್ನು ಹೊಂದಿರುವ ಪಡಿತರ ಚೀಟಿದಾರರಿಗೆ ಈಗಾಗಲೇ ಮೇ ಮಾಹೆಯಲ್ಲಿಯೇ ಕೇಂದ್ರ ಸರ್ಕಾರದ ಎರಡು ತಿಂಗಳ ಪಡಿತರ ಹಂಚಿಕೆಯನ್ನು ನೀಡಲಾಗಿದೆ. ಆದ್ದರಿಂದ ಇಂತಹ ಕಾರ್ಡುದಾರರಿಗೆ ಜೂನ್-2026 ರ ಮಾಹೆಗೆ ಯಾವುದೇ ಪಡಿತರ ಹಂಚಿಕೆ ಇರುವುದಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಮಧುಸೂಧನ್ ತಿಳಿಸಿದ್ದಾರೆ.
[ad_2]
Source link

















Leave a Reply