Advertisement

ಬಾಬಿ ಡಿಯೋಲ್ ಜೊತೆ `ಲವ್‌’ – ಜೀವನದ ಅದ್ಭುತ ಘಳಿಗೆ ಎಂದ ಪೂಜಾ ಭಟ್

[ad_1]

bobby deol was a magical human being to be with pooja bhatt opens up about break up

ಬ್ರೇಕಪ್ ಬಳಿಕ ಎಕ್ಸ್ ಕುರಿತು ಮಾತನಾಡಲು ಹಿಂಜರಿಯುವ ನಟಿಯರ ಮಧ್ಯೆ ಬಾಲಿವುಡ್ ಪೂಜಾ ಭಟ್ ಪ್ರೇಮ್ ಕಹಾನಿ ಕುರಿತು ಹೆಮ್ಮೆಯಿಂದ ಮಾತನಾಡಿದ್ದು, ಇಡೀ ಬಾಲಿವುಡ್‌ನಲ್ಲಿ ಚರ್ಚೆಯಾಗ್ತಿದೆ. ಒಂದು ಕಾಲದ ಮಾದಕ ಚೆಲುವೆ ಪೂಜಾ ಭಟ್ 90ರ ದಶಕದಲ್ಲಿ ಖ್ಯಾತ ನಟ ಬಾಬಿ ಡಿಯೋಲ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಅನೇಕ ವರ್ಷಗಳ ಕಾಲ ಪ್ರೀತಿಸಿ ಬಳಿಕ ಇಬ್ಬರೂ ದೂರಾಗಿದ್ರು. ಇದೀಗ ಇಬ್ಬರೂ ಬಾಳ ದಾರಿಯಲ್ಲಿ ತುಂಬಾ ಮುಂದಕ್ಕೆ ಬಂದಿದ್ದಾರೆ. ಆದರೆ ಇದೀಗ ತನ್ನ ಹಳೇ ಲವ್‌ಸ್ಟೋರಿ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ ಪೂಜಾ ಭಟ್.

ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಪುತ್ರಿ ಪೂಜಾ ಭಟ್ ಹಾಗೂ ಧರ್ಮೇಂದ್ರ ಪುತ್ರ ಬಾಬಿ ಡಿಯೋಲ್ ಲವ್‌ಸ್ಟೋರಿ ಜಗಜ್ಜಾಹೀರು ಆದಷ್ಟು ವೇಗವಾಗೇ ಕಿತ್ತುಕೊಂಡಿತ್ತು. ಬಳಿಕ ಬಾಬಿ ತಾನ್ಯ ಎಂಬುವರನ್ನು ಮದುವೆಯಾಗಿ ಇದೀಗ ಸುಖಿ ಸಂಸಾರ ನಡೆಸುತ್ತಿದ್ದಾರೆ. ಪೂಜಾ ಭಟ್ ಕೂಡ ಎಲ್ಲವನ್ನೂ ಮರೆತು ಬಹುದೂರ ಬಂದಿದ್ದಾರೆ. ಇಬ್ಬರ ಬ್ರೇಕಪ್‌ಗೆ ಅದೇನು ಕಾರಣ ಅನ್ನೋದ್ರ ಅಸಲಿ ಕಥೆ ಇದುವರೆಗೆ ಯಾರಿಗೂ ತಿಳಿದಿಲ್ಲ. ಆದರೀಗ ಖಾಸಗಿ ಯೂಟ್ಯೂಬ್ ಚಾನಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಬಾಬಿ ಡಿಯೋಲ್ ಜೊತೆಗಿನ ತಮ್ಮ ಲವ್‌ಸ್ಟೋರಿ ಕುರಿತು ಮನಬಿಚ್ಚಿ ಮಾತಾಡಿದ್ದಾರೆ ಪೂಜಾ.

ಬಾಬಿ ಜೊತೆ ಸೀರಿಯಸ್ ಆಗಿ ಲವ್ ಮಾಡುತ್ತಿದ್ದ ವಿಚಾರ ಹೇಳಿಕೊಂಡ ಪೂಜಾ “ಅದು ನನ್ನ ಜೀವನದ ಅತ್ಯಂತ ಅದ್ಭುತ ಘಳಿಗೆ” ಎಂದು ವರ್ಣಿಸಿದ್ದಾರೆ. “ಬಾಬಿ ಕೂಡ ಅದ್ಭುತ ವ್ಯಕ್ತಿ” ಎಂದು ಕೊಂಡಾಡಿದ್ದಾರೆ. ಹೀಗಿದ್ರೂ ಬ್ರೇಕಪ್ ಆಗಿದ್ಯಾಕೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಪೂಜಾ ಬ್ರೇಕಪ್ ಆಗಿ ಅನೇಕ ವರ್ಷಗಳು ಉರುಳಿದೆ, ಅವರಿಗೂ ಕುಟುಂಬವಿದೆ, ಇಷ್ಟು ವರ್ಷಗಳಾದ್ಮೇಲೆ ಈಗ ಕುಳಿತು ಬ್ರೇಕಪ್‌ಗೆ ಕಾರಣ ಹೇಳೋದ್ರಲ್ಲಿ ಅರ್ಥವಿಲ್ಲ ಎಂದಿದ್ದಾರೆ ಪೂಜಾ ಭಟ್.

ಅಂದಹಾಗೆ ಇತ್ತೀಚೆಗೆ ಬಾಬಿ ಡಿಯೋಲ್ `ಆನಿಮಲ್’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕಮ್‌ಬ್ಯಾಕ್ ಆಗಿದ್ರು. ಇದೀಗ ಬಾಬಿ ಸಿನಿಮಾಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಮಾಜಿ ಪ್ರೇಮಿಯ ಕುರಿತು ಮಾತನಾಡುವ ವೇಳೆ ಆನಿಮಲ್ ಸಿನಿಮಾದಲ್ಲಿ ಬಾಬಿ ಪಾತ್ರವನ್ನ ಹಾಡಿ ಹೊಗಳೋದನ್ನೂ ಮರೆಯಲಿಲ್ಲ ಪೂಜಾ ಭಟ್. ಹೀಗೆ ಬ್ರೇಕಪ್ ಆದ್ಮೇಲೆ ಮಾಜಿ ಪ್ರೇಮಿ ಬಗ್ಗೆ ಕೆಟ್ಟದ್ದನ್ನೇ ಮಾತನಾಡಿ, ಕೆಟ್ಟವರನ್ನಾಗಿ ಬಿಂಬಿಸುವ ಅನೇಕರ ನಡುವೆ ಪೂಜಾ ಭಟ್ ಮಾಜಿ ಪ್ರೇಮಿಯನ್ನು ಹಾಗೂ ಪ್ರೀತಿಸಿದ ಸಮಯಕ್ಕೆ ಕೃತಜ್ಞರಾಗಿರೋದು ವಿಶೇಷವೇ ಸರಿ.

[ad_2]

Source link publictv.in

Leave a Reply

Your email address will not be published. Required fields are marked *