[ad_1]

ಬೆಂಗಳೂರು: ಬ್ರೇಕ್‌ಫಾಸ್ಟ್ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಂತ್ರಿಗಳ ಜೊತೆ ಸಹಕಾರವನ್ನು ಕೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ಇಂದು ರಾಜೀನಾಮೆ ನೀಡುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು(Siddaramaiah) ಇಂದು ಬೆಳಗ್ಗೆ ಕಾವೇರಿ ನಿವಾಸದಲ್ಲಿ ಮಂತ್ರಿಗಳ ಜೊತೆ ಉಪಹಾರ ಸಭೆಯನ್ನು ಆಯೋಜಿಸಿದ್ದರು.
ಈ ಸಭೆಯ ಆರಂಭದಲ್ಲಿ ಸಿದ್ದರಾಮಯ್ಯನವರು ಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಿಎಂ ಬಳಿಕ ಮಾತನಾಡಿದ ಡಿಕೆಶಿ, ನಾನು ಅಧ್ಯಕ್ಷನಾಗಿ ಇಲ್ಲಿವರೆಗೆ ಬಂದಿದ್ದೇನೆ. ಇದುವರೆಗೆ ನೀವೆಲ್ಲರೂ ಉತ್ತಮವಾಗಿ ಸಹಕರಿಸಿದ್ದೀರಿ. ಮುಂದೆಯೂ ಇದೇ ರೀತಿಯ ಸಹಕಾರ ನೀಡಬೇಕು ಎಂದು ಡಿಕೆಶಿ ಮನವಿ ಮಾಡಿಕೊಂಡರು.
ಬೇರೆ ಯಾವ ವಿಚಾರವೂ ಪ್ರಸ್ತಾಪಿಸದ ಡಿಕೆಶಿ ಎಲ್ಲರ ಸಹಕಾರ ಮುಂದೆಯು ಹೀಗೆ ಇರಲಿ ವಿನಂತಿಸಿಕೊಂಡರು. ಈ ವೇಳೆ ಡಿಕೆಶಿ ಸಿದ್ದರಾಮಯ್ಯನವರ ಆಡಳಿತವನ್ನು ಕೊಂಡಾಡಿದರು ಎಂಬ ವಿಚಾರ ತಿಳಿದುಬಂದಿದೆ. ಇದನ್ನೂ ಓದಿ: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ: ಸಿದ್ದರಾಮಯ್ಯ
ಅಧ್ಯಕ್ಷರಾಗಿ 6 ವರ್ಷ
ಡಿಕೆ ಶಿವಕುಮಾರ್ ಅವರು 2020ರ ಮಾರ್ಚ್ 11ರಂದು ಅಧಿಕೃತವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಅಧ್ಯಕ್ಷರಾಗಿ ನೇಮಕಗೊಂಡರು. ಅವರು ಜುಲೈ 2, 2020 ರಂದು ದಿನೇಶ್ ಗುಂಡೂರಾವ್ ಅವರ ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಡಿಕೆಶಿ, ಸಿದ್ದರಾಮಯ್ಯ ಜೋಡೆತ್ತಿನಂತೆ ಕೆಲಸ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷವು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.
[ad_2]
Source link publictv.in

















Leave a Reply