Advertisement

ದೇಶದ ಜನರಿಗೆ ಬೆಳ್ಳಂಬೆಳಗ್ಗೆ ತೈಲ ಶಾಕ್‌ – ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ದರ ಏರಿಕೆ ಹೇಗಿದೆ?

[ad_1]

Petrol Diesel Price

ನವದೆಹಲಿ: ದೇಶದ ಗ್ರಾಹಕರಿಗೆ ಕೇಂದ್ರ ಸರ್ಕಾರ (Central Government) ಬೆಳ್ಳಂಬೆಳಗ್ಗೆ ತೈಲ ಶಾಕ್‌ ಕೊಟ್ಟಿದೆ. ಸೋಮವಾರ (ಇಂದು) ಪೆಟ್ರೋಲ್‌, ಡೀಸೆಲ್‌ ಬೆಲೆ‌ ಮತ್ತೆ ಏರಿಕೆ (Fuel Price Hike) ಮಾಡಿ ಶಾಕ್‌ ಕೊಟ್ಟಿದೆ. ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮೇಲಿನ ಬೆಲೆಯನ್ನು 3 ರೂ. ಸನಿಹದ ವರೆಗೂ ಹೆಚ್ಚಿಸಲಾಗಿದೆ. ಇದು ಕಳೆದ 10 ದಿನಗಳಲ್ಲಿ 4ನೇ ಬಾರಿಗೆ ಮಾಡಿದ ದರ ಏರಿಕೆಯಾಗಿದೆ.

ಅಲ್ಲದೇ ಸಿಎನ್‌ಜಿ (CNG) ಬೆಲೆಯನ್ನ ಪ್ರತಿ ಕೆಜಿಗೆ 1 ರೂ. ಹೆಚ್ಚಿಸಲಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ 3ನೇ ಬಾರಿಗೆ ಮಾಡಿದ ದರ ಏರಿಕೆಯಾಗಿದೆ. ಒಟ್ಟು ದರ ಏರಿಕೆ 4 ರೂ. ತಲುಪಿದೆ.

PETROL

ಪ್ರಮುಖ ಮೆಟ್ರೋ ಸಿಟಿಗಳಲ್ಲಿ ದರ ಏರಿಕೆ ಹೇಗಿದೆ?

ಇಂದಿನ ಪೆಟ್ರೋಲ್‌ ದರ
* ಬೆಂಗಳೂರು: 110.89 (+2.84 ರೂ. ಏರಿಕೆ)
* ದೆಹಲಿ: 102.12 ರೂ. (+2.61 ರೂ. ಏರಿಕೆ)
* ಕೋಲ್ಕತ್ತಾ: 113.51 ರೂ. (+2.87 ರೂ. ಏರಿಕೆ)
* ಮುಂಬೈ: 111.21 ರೂ. (+2.72 ರೂ. ಏರಿಕೆ)
* ಚೆನ್ನೈ: 107.77 ರೂ. (+2.46 ರೂ. ಏರಿಕೆ)

ಇಂದಿನ ಡೀಸೆಲ್ ಬೆಲೆಗಳು
* ಬೆಂಗಳೂರು: 98.80 ರೂ. (+2.81 ರೂ. ಏರಿಕೆ)
* ದೆಹಲಿ: 95.20 ರೂ. (+2.71 ರೂ. ಏರಿಕೆ)
* ಕೋಲ್ಕತ್ತಾ: 99.82 ರೂ. (+2.80 ರೂ. ಏರಿಕೆ)
* ಮುಂಬೈ: 97.83 ರೂ. (+2.81 ರೂ. ಏರಿಕೆ)
* ಚೆನ್ನೈ: 99.55 ರೂ. (+2.57 ರೂ. ಏರಿಕೆ)

ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತದ ನಡುವೆ ಬೆಲೆ ಏರಿಕೆಗಳು ಕಂಡುಬಂದಿವೆ. ಇದರಿಂದ ತೈಲ ಮಾರುಕಟ್ಟೆ ಕಂಪನಿಗಳ ಆಮದು ವೆಚ್ಚಗಳ ಮೇಲೆ ಹೊರೆ ಬೀಳುವಂತಾಗಿದೆ. ಆದ್ರೆ ಕೇಂದ್ರ ಸರ್ಕಾರ ಮಾತ್ರ ಇದು ಭಾರತೀಯ ತೈಲ ಕಂಪನಿಗಳು ಎದುರಿಸುತ್ತಿರುವ ನಷ್ಟ ತಗ್ಗಿಸಲು ಕೈಗೊಂಡ ಕ್ರಮವಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಮೇ 15 ರಂದು ಕೇಂದ್ರ ಸರ್ಕಾರ ಮೊದಲ ಬಾರಿಗೆ ಪಟ್ರೋಲ್‌, ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ಏಕಾಏಕಿ 3 ರೂ.ಗಳಷ್ಟು ಹೆಚ್ಚಳ ಮಾಡಿತ್ತು. ಇದೀಗ ಸತತ 4ನೇ ಬಾರಿಗೆ ದರ ಏರಿಕೆ ಮಾಡಲಾಗಿದೆ.

[ad_2]

Source link publictv.in

Leave a Reply

Your email address will not be published. Required fields are marked *