ಹಿಂದೂ ಯುವತಿಯನ್ನು ಬ್ಲಾಕ್ ಮೇಲ್ ಮಾಡಿ ಅತ್ಯಾ ಚಾರ ಮಾಡಿರುವ ಆರೋಪದಡಿ ಮತ್ತೊಂದು ಯುವಕ ಬಂಧನವಾಗಿದೆ..
ಹುಬ್ಬಳ್ಳಿ: ಕಳೆದ ಎರಡು ದಿನಗಳಿಂದ ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್ ಸಮೀರ್ ಲವ್ ಜಿಹಾದ್ ಸುದ್ದಿ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ತಮ್ಮ ಮನೆಯ ಹೆಣ್ಣುಮಕ್ಕಳನ್ನು ಜಿಮ್ ಗೆ ಕಳುಹಿಸುವುದು ಎಷ್ಟು ಸೇಫ್ ಅಂತ ಪಾಲಕರು ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೊತ್ತಿನಲ್ಲಿ ಮತ್ತೊಂದು ಅದೇ ಮಾದರಿಯ ಪ್ರಕರಣ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೊರ ಬಂದಿದೆ. ಯುವತಿ ಜೊತೆಗೆ ಸ್ನೇಹ ಬೆಳೆಸಿ ಆಕೆ ಜೊತೆಗಿನ ಖಾಸಗಿ ಕ್ಷಣಗಳ ವಿಡಿಯೋ ಪೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮಾಡಿ ನಿರಂತರ ಅತ್ಯಾಚಾರ ಆರೋಪದಡಿ ಮುಫೀಸ್ ಎಂಬ ಆರೋಪಿಯನ್ನು ಬಂಧನ ಮಾಡಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ. ಈ ಆರೋಪಿ ಕೂಡ ಸಮೀರ್ ನಡೆಸುತ್ತಿದ್ದ ಮಸಲ್ ಫ್ಯಾಕ್ಟರಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಎನ್ನಲಾಗಿದೆ
ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಲೇಜು ಶಿಕ್ಷಣ ಕಲಿಯುತ್ತಿರುವ ಸಂತ್ರಸ್ತೆಗೆ, ಕಾಲೇಜು ಕಾರ್ಯಕ್ರಮಯೊಂದರಲಿ ತನ್ನ ಸ್ನೇಹಿತೆ ಮೂಲಕ ಆರೋಪಿ ಮುಫೀಸ್, ಸಂತ್ರಸ್ತೆ ಪರಿಚಯವಾಗಿದ್ದ, ಬಳಿಕ ಸ್ನೇಹದ ನೆಪದಲ್ಲಿ ಸಂಬಂಧ ಬೆಳೆಸಿದ್ದ, ಜೊತೆಗೆ ಮದುವೆಯಾಗಲು ತಯಾರಿ ನಡೆಸಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಸಂತ್ರಸ್ತೆ ಕುಟುಂಬಸ್ಥರು, ಬುದ್ಧಿವಾದ ಹೇಳಿದ್ದಾರೆ. ಇದರಿಂದ ಸಂತ್ರಸ್ತೆ ಆರೋಪಿ ಜೊತೆಗೆ ಬ್ರೇಕ್ ಮಾಡಿಕೊಂಡು, ಆತನಿಂದ ಅಂತರ ಕಾಯ್ದಿಕೊಂಡಿದ್ದಾಳೆ. ಇದರಿಂದ ಆರೋಪಿ ಸಂತ್ರಸ್ತೆ ಜೊತೆಗಿನ ವಿಡಿಯೋ ಮತ್ತು ಪೋಟೋ ವೈರಲ್ ಮಾಡುವ ಮತ್ತು ಜೀವ ಬೆದರಿಕೆ ಹಾಕಿ ನಿರಂತರ ಅತ್ಯಾಚಾರ ಮಾಡಿದ್ದಾನೆಂದು ಸಂತ್ರಸ್ತೆ ಆರೋಪಿಸಿದ್ದಾಳೆ..
ಇದರ ನಡುವೆ ಜಿಮ್ ಟ್ರೈನರ್ ಸಮೀರ್ ಅಧಿಕೃತ ಬಂಧನವಾಗಿದೆ. ಶುಕ್ರವಾರದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮೀರ್ ನನ್ನು ಬಂಧನ ಮಾಡಿರುವ ವಿದ್ಯಾ ನಗರ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಮಾದರಿಯಲ್ಲಿ ಜಿಮ್ ಜಿಹಾದ ನಡೆಯುತ್ತಿದೆಯಾ ಎನ್ನುವ ಅನುಮಾನ ಮೂಡಿದ್ದು, ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಯಬೇಕೆಂಬುವುದು ಹುಬ್ಬಳ್ಳಿ ಜನರ ಆಗ್ರಹ..













Leave a Reply