Advertisement

ಕೊಪ್ಪಳ ಲವ್ ಜಿಹಾದ್‌ಗೆ ಟ್ವಿಸ್ಟ್ – ಆರೋಪಿಗೆ ಅಂತರಾಜ್ಯ ಲಿಂಕ್, ಹೈಫೈ ಜೀವನಕ್ಕಾಗಿ ಬುಕ್ಕಿಗಳಿಂದ ಆರ್ಥಿಕ ಸಹಾಯ



Koppal Love Jihad

ಕೊಪ್ಪಳ: ಜಿಲ್ಲೆಯಲ್ಲಿ ಕೇಳಿಬಂದಿದ್ದ ಲವ್ ಜಿಹಾದ್ (Love Jihad) ಆರೋಪ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಆರೋಪಿಗೆ ಅಂತರಾಜ್ಯದವರ ಜೊತೆ ಲಿಂಕ್ ಇರುವುದು ಗೊತ್ತಾಗಿದ್ದು, ಆರ್ಥಿಕ ಸಹಾಯ ಪಡೆದಿದ್ದ ಎಂದು ಬೆಳಕಿಗೆ ಬಂದಿದೆ.

ಆರೋಪಿ ಮುಸ್ತಫಾ ಖಾದ್ರಿಗೆ ಅಂತರಾಜ್ಯ ಲಿಂಕ್ ಇದ್ದು, ಗೋವಾ, ಮುಂಬೈನಿಂದ ಆರ್ಥಿಕ ಸಹಾಯ ದೊರೆತಿದೆ ಎನ್ನಲಾಗಿದೆ. ಗೋವಾ ಹಾಗೂ ಮುಂಬೈನ ಇಬ್ಬರು ಮಟ್ಕಾ ಬುಕ್ಕಿಗಳ ಸಂಪರ್ಕವಿದೆ. ಕೊಪ್ಪಳದಲ್ಲಿ ಹೈಫೈ ಜೀವನ ನಡೆಸಲು ಅಂತರಾಜ್ಯಗಳ ಬುಕ್ಕಿಗಳಿಂದ ಆರ್ಥಿಕ ಸಹಾಯ ದೊರೆತಿದೆ. ಇದೇ ಹಣದಿಂದಲೇ ಮುಸ್ತಫಾ ಹುಡುಗಿಯರ ಜೊತೆ ಎಂಜಾಯ್ ಮಾಡುತ್ತಿದ್ದ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮುಸ್ಲಿಂ ಯುವಕನ 2 ಮೊಬೈಲ್‌ನಲ್ಲಿ ಯುವತಿಯರ 7,000 ಫೋಟೋಸ್‌, 9,700 ವಿಡಿಯೋಸ್‌ – ಹೌಹಾರಿದ ಪೊಲೀಸರು

ಇನ್ನೂ ಮುಸ್ತಫಾ ಖಾದ್ರಿ ಮೊಬೈಲ್‌ನಲ್ಲಿ 9,700 ವಿಡಿಯೋಗಳು, 7,000 ಫೋಟೋಗಳು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ವಿಡಿಯೋಗಳನ್ನು ಮುಸ್ತಫಾ ಬೇರೆಯವರಿಗೆ ರವಾನಿಸಿರೋ ಸಾಧ್ಯತೆ ಇದ್ದು, ಹೀಗಾಗಿ ಮುಸ್ತಫಾ ವಿರುದ್ಧ ಐಟಿ ಆಕ್ಟ್ ಅಡಿಯಲ್ಲಿ ದೂರು ದಾಖಲಾಗಿದೆ.

ಈಗಾಗಲೇ ಮುಸ್ತಫಾ ಪ್ರೀತಿಸುತ್ತಿದ್ದ ಯುವತಿಯಿಂದ ಕೂಡ ದೂರು ದಾಖಲಾಗಿದೆ. ಕೊಪ್ಪಳ ನಗರ ಠಾಣೆಗೆ ಅಗಮಿಸಿ ಮುಸ್ತಫಾನನ್ನ ಪ್ರೀತಿಸುತ್ತಿದ್ದ ಯುವತಿಯಿಂದ ಮೊಬೈಲ್ ಕಸಿದುಕೊಂಡ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ. ಮೆಡಿಕಲ್ ಕಾಲೇಜ್ ವಾಟರ್ ಟ್ಯಾಂಕ್ ಬಳಿ ಊಟ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ 8-10 ಜನ ಅಪರಿಚಿತ ಹುಡುಗರು ಮುಸ್ತಫಾಗೆ ಜೀವ ಬೆದರಿಕೆ ಹಾಕಿ ಅತನ ಬಳಿ ಇದ್ದ ಎರಡು ಮೊಬೈಲ್ ನೋಡಿ ಕೊಡುತ್ತೇನೆಂದು ಪಡೆದುಕೊಂಡು ವಾಪಸ್ ಕೊಟ್ಟಿಲ್ಲಾ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಈ ಲವ್ ಜಿಹಾದ್ ಪ್ರಕರಣ ಎಲ್ಲ ಕಡೆ ಸದ್ದು ಮಾಡ್ತಿದೆ. ಸದ್ಯ ಕೊಪ್ಪಳದಲ್ಲಿ ಕೂಡಾ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ನಡೀತಾ ಲವ್ ಜಿಹಾದ್? – ಮುಸ್ಲಿಂ ಯುವಕನ ಫೋನಲ್ಲಿ ರಾಶಿ ರಾಶಿ ಫೋಟೋ, ವಿಡಿಯೋ ಪತ್ತೆ




Source link publictv.in

Leave a Reply

Your email address will not be published. Required fields are marked *