Advertisement

ಕೆಲಸಕ್ಕೆಂದು ಇಸ್ರೆಲ್ ಹೊರಟಿದ್ದ ಯುವಕ ನೇಣಿಗೆ ಶರಣು!!

[ad_1]

ಕೆಲಸದ ನಿಮಿತ್ತ ಇಸ್ರೇಲ್‌ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲದಲ್ಲಿ ಸೋಮವಾರ ನಡೆದಿದೆ. 

ಉಳ್ಳಾಲ ಹೊಯ್ಗೆ ನಿವಾಸಿ, ಸೂರ್ಯಪ್ರಕಾಶ್‌ ಡಿ’ಸೋಜಾ (42) ಮೃತಪಟ್ಟ ಯುವಕ. ಕಳೆದ ಒಂದು ವರ್ಷದಿಂದ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದ ಇವರು, ಸಹೋದರನ ಮದುವೆ ನಿಮಿತ್ತ ಊರಿಗೆ ಬಂದಿದ್ದರು. ಮೇ 17ರಂದು ಅವರು ಮತ್ತೆ ಇಸ್ರೇಲ್‌ಗೆ ಮರಳಬೇಕಿತ್ತು.

ಆದರೆ ಸೋಮವಾರ ನಸುಕಿನ ಜಾವ ಸೂರ್ಯಪ್ರಕಾಶ್‌ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ತಾಯಿ ಕೋಣೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸೂರ್ಯ ಪ್ರಕಾಶ್ ಕಳೆದ ಕೆಲವು ಸಮಯದಿಂದ ನಿರಂತರ ಎದೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಎದೆ ನೋವು ತಾಳಲಾರದೆ ಅವರು ಈ ರೀತಿಯ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಸದ್ಯ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

banner



[ad_2]

Source link

Leave a Reply

Your email address will not be published. Required fields are marked *