Advertisement

ಮಡಿಕೇರಿ ಕಾಫಿ ತೋಟದ ಕಂದಕಕ್ಕೆ ಬಿದ್ದ ಕಾರು: ಸ್ಥಳೀಯರಿಂದ ಚಾಲಕನ ರಕ್ಷಣೆ

[ad_1]

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನೀರುಕೊಲ್ಲಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಪಕ್ಕದ ಆಳವಾದ ಕಂದಕಕ್ಕೆ ಉರುಳಿಬಿದ್ದು, ಅದೃಷ್ಟವಶಾತ್‌ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಕುಂದಾಪುರ ಮೂಲದ ಸಿರಾಜ್‌ ಎಂಬುವವರು ಕಾರಿನಲ್ಲಿ ಕುಂದಾಪುರದಿಂದ ಮಡಿಕೇರಿಗೆ ಬರುತ್ತಿದ್ದರು. ರಾ.ಹೆ.275 ರ ಮಡಿಕೇರಿ ಮತ್ತು ಸಂಪಾಜೆ ನಡುವಿನ ನೀರುಕೊಲ್ಲಿ ಎಂಬಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ತಡೆಗೋಡೆಯನ್ನು ದಾಟಿ ನೇರವಾಗಿ ಕಂದಕಕ್ಕೆ ಉರುಳಿದೆ.

ತಕ್ಷಣವೇ ಸ್ಥಳಕ್ಕೆ ಬಂದ ಸ್ಥಳೀಯ ನಿವಾಸಿಗಳು ಮತ್ತು ಇತರ ವಾಹನ ಸವಾರರು, ಪ್ರಾಣದ ಹಂಗು ತೊರೆದು ಕಂದಕಕ್ಕೆ ಇಳಿದು ಚಾಲಕ ಸಿರಾಜ್‌ನನ್ನು ರಕ್ಷಣೆ ಮಾಡಿದ್ದಾರೆ. ಸಿರಾಜ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.



[ad_2]

Source link

Leave a Reply

Your email address will not be published. Required fields are marked *