Advertisement

ಕಾಂಗ್ರೆಸ್‌ಗೆ ಧಿಕ್ಕಾರ – ಡಿಕೆಶಿಗೆ ದಾವಣಗೆರೆಯಲ್ಲಿ ಮುಸ್ಲಿಮರಿಂದ ಪ್ರತಿಭಟನೆಯ ಬಿಸಿ

[ad_1]

ದಾವಣಗೆರೆ: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ದಾವಣಗರೆಯಲ್ಲಿ ನಮ್ಮ ಸಮುದಾಯದವರಿಗೆ ಟಿಕೆಟ್‌ ನೀಡಿದ್ದಕ್ಕೆ ಮುಸ್ಲಿಮರು ಪ್ರತಿಭಟಿಸಿ ಸಿಟ್ಟು ಹೊರಹಾಕಿದ್ದಾರೆ.

ಡಿಕೆ ಶಿವಕುಮಾರ್ ಹಾಗೂ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ದಾವಣಗೆರೆ ನಗರದ ಅಖ್ತರ ರಜಾ ಸರ್ಕಲ್‌ನಲ್ಲಿರುವ ಪಕ್ಷೇತ ಅಭ್ಯರ್ಥಿ ಸೈಯದ್ ಸೈಫುಲ್ಲಾ ನಿವಾಸಕ್ಕೆ ಆಗಮಿಸಿದ್ದರು. ಭೇಟಿಯಾಗಿ ವಾಪಸ್ಸಾಗುವಾಗ ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಅಪ್ಪನ ಮೇಲಿನ ಸಿಟ್ಟಿಗೆ 4ರ ಮಗುವಿನೊಂದಿಗೆ ವಿಕೃತಿ – ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿದ ಕಿರಾತಕ

ಮುಸ್ಲಿಮರಿಗೆ ಟಿಕೆಟ್ ನೀಡದ ಕಾಂಗ್ರೆಸ್‌ಗೆ ಧಿಕ್ಕಾರ, ಗೋ ಬ್ಯಾಕ್ ಕಾಂಗ್ರೆಸ್ ಎಂದು ಕೂಗಿದ್ದಾರೆ. ಪ್ರತಿಭಟನೆಯಿಂದಾಗಿ ಒಂದು ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಡಿಕೆಶಿ, ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು ಸ್ಥಳದಿಂದ ತೆರಳಿದರು.

 

[ad_2]

Source link publictv.in

Leave a Reply

Your email address will not be published. Required fields are marked *