Advertisement

Tamilnadu Assembly Elections | ಬಿಜೆಪಿಯಿಂದ 27 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌

[ad_1]

bjp flag

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ (Tamilnadu Assembly Election) ಭಾರತೀಯ ಜನತಾ ಪಕ್ಷ (BJP) 27 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅವನಾಶಿ ಸ್ಥಾನದಿಂದ ಕೇಂದ್ರ ಸಚಿವ ಎಲ್.ಮುರುಗನ್ ಮತ್ತು ಮೈಲಾಪುರದಿಂದ ತೆಲಂಗಾಣ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರನ್ನು ಕಣಕ್ಕಿಳಿಸಿದೆ. ಕೊಯಮತ್ತೂರು ಉತ್ತರದಿಂದ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಮತ್ತು ಸತ್ತೂರಿನಿಂದ ರಾಜ್ಯ ಮುಖ್ಯಸ್ಥೆ ನೈನಾರ್ ನಾಗೇಂದ್ರನ್ ಕಣಕ್ಕೆ ಇಳಿಯಲಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ಹೆಲಿಕಾಪ್ಟರ್‌ನಲ್ಲಿ ಇಳಿಯುವಾಗ ತಾಂತ್ರಿಕ ದೋಷ – ಅಸ್ಸಾಂ ರ‍್ಯಾಲಿ ರದ್ದು

ಪಕ್ಷವು ಮೋಡಕುರಿಚಿಯಿಂದ ಕೀರ್ತಿಕಾ ಶಿವಕುಮಾರ್, ವಿಲವಂಕೋಡ್‌ನಿಂದ ಎಸ್.ವಿಜಯಧರಣಿ ಮತ್ತು ಥಲ್ಲಿ ಸ್ಥಾನದಿಂದ ನಾಗೇಶ್ ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಹೆಸರಿಸಿದೆ.

ತಮಿಳುನಾಡು ವಿಧಾನಸಭಾ ಚುನಾವಣೆಗೆ ಎನ್‌ಡಿಎ ಸೀಟು ಹಂಚಿಕೆಯ ಭಾಗವಾಗಿ ಎಐಎಡಿಎಂಕೆ 169 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಭಾರತೀಯ ಜನತಾ ಪಕ್ಷ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಅನ್ಬುಮಣಿ ರಾಮದಾಸ್ ನೇತೃತ್ವದ ಪಟ್ಟಾಲಿ ಮಕ್ಕಳ್ ಕಚ್ಚಿಗೆ 18 ಸ್ಥಾನಗಳನ್ನು ಹಂಚಿಕೆ ಮಾಡಿದ್ದರೆ, ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗ 11 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.ಇದನ್ನೂ ಓದಿ: Electric Car Market| ಫಸ್ಟ್‌ ಟೈಂ ಎಂಜಿ ಹಿಂದಿಕ್ಕಿದ ಮಹೀಂದ್ರಾ – ಟಾಟಾ ಮೋಟಾರ್ಸ್‌ಗೆ ಅಗ್ರಸ್ಥಾನ


[ad_2]

Source link publictv.in

Leave a Reply

Your email address will not be published. Required fields are marked *