Advertisement

2nd PUC ಫಲಿತಾಂಶದಲ್ಲಿ ಎಡವಟ್ಟು – 100ಕ್ಕೆ 111 ಅಂಕ ಕೊಟ್ಟ PU ಬೋರ್ಡ್

[ad_1]

2nd PUC ರಿಸಲ್ಟ್ ನೀಡುವಾಗ ಪಿಯು ಬೋರ್ಡ್ ಎಡವಿಟ್ ಮಾಡಿಕೊಂಡಿದ್ದು ವಿದ್ಯಾರ್ಥಿಯೊಬ್ಬನಿಗೆ 100ಕ್ಕೆ 111 ಅಂಕವನ್ನು ನೀಡಿ ಪಾಸ್‌ ಮಾಡಿದೆ.

ಹೌದು, ಹಿಂದಿ (Hindi) ವಿಷಯದಲ್ಲಿ ವಿದ್ಯಾರ್ಥಿಗೆ 100 ಅಂಕಗಳಿಗೆ 111 ಅಂಕ ನೀಡಲಾಗಿದೆ. ಅಂಕಪಟ್ಟಿಯಲ್ಲಿರುವ ನೋಂದಣಿ ಸಂಖ್ಯೆಯನ್ನು ಹಾಕಿ ಫಲಿತಾಂಶವನ್ನು ಪಬ್ಲಿಕ್‌ ಟಿವಿ ಪರಿಶೀಲಿಸಿದ್ದು ಈಗಲೂ ವೆಬ್‌ಸೈಟ್‌ನಲ್ಲಿ 111 ಅಂಕವನ್ನೇ ತೋರಿಸುತ್ತಿದೆ.

ಹಿಂದಿ ವಿಷಯದಲ್ಲಿ ಥಿಯರಿಯಲ್ಲಿ ವಿದ್ಯಾರ್ಥಿಗೆ 94 ಅಂಕ ಬಂದಿದ್ದರೆ ಕಾಲೇಜು 17 ಆಂತರಿಕ ಅಂಕಗಳನ್ನು ನೀಡಿದೆ. ಇಲ್ಲಿ 80 ಅಂಕಗಳಿಗೆ 94 ಅಂಕ ನೀಡಿದ್ದು ಹೇಗೆ ಎನ್ನುವುದು ಆಶ್ಚರ್ಯ.

ಈ ವಿದ್ಯಾರ್ಥಿಯದ್ದು ಮಾತ್ರ ಅಲ್ಲ ಅನೇಕ ವಿದ್ಯಾರ್ಥಿಗಳ ಫಲಿತಾಂಶವನ್ನು ತಪ್ಪಾಗಿ ಪ್ರಕಟಿಸಿದೆ. 6 ವಿಷಯದಲ್ಲೂ 100 ಕ್ಕಿಂತ ಹೆಚ್ಚು ಅಂಕವನ್ನು ನೀಡಲಾಗಿದೆ. ಓರ್ವ ವಿದ್ಯಾರ್ಥಿಗೆ 600 ಅಂಕಕ್ಕೆ 683 ಅಂಕಗಳನ್ನು ನೀಡಲಾಗಿದೆ. ಅಂಕ ಉತ್ತಮಪಡಿಸಿಕೊಳ್ಳಲು ಮರು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ತಪ್ಪಾಗಿದೆ. ಈ ಪೈಕಿ ಡಿಜಿಲಾಕರ್‌ನಲ್ಲಿ ಕೆಲವರ ಅಂಕಪಟ್ಟಿ ಸರಿಯಾಗಿ ಬಂದಿದ್ದರೆ ವೆಬ್‌ಸೈಟ್‌ನಲ್ಲಿ ತಪ್ಪಾಗಿದೆ.

banner



[ad_2]

Source link

Leave a Reply

Your email address will not be published. Required fields are marked *