Advertisement

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಎಡವಟ್ಟು, 600 ಕ್ಕೆ 683 ಅಂಕ ನೀಡಿದ ಬೋರ್ಡ್‌

[ad_1]

ಬೆಂಗಳೂರು ಎ.10: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇದರಲ್ಲಿ 600ಕ್ಕೆ 600 ಅಂಕವನ್ನು ಪಡೆದವರಿದ್ದಾರೆ. ಆದರೆ ಸರಕಾರದ ಅಧಿಕೃತ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ನಂತರ ಅಂಕಪಟ್ಟಿಯಲ್ಲಿಯೇ ಗಂಭೀರ ಲೋಪವೊಂದು ಕಂಡು ಬಂದಿದೆ. 600 ಅಂಕಗಳ ಪರೀಕ್ಷೆಗೆ 683 ಅಂಕಗಳನ್ನು ಬೋರ್ಡ್‌ ನೀಡಿ ಎಡವಟ್ಟು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ ಕೆಲ ವಿದ್ಯಾರ್ಥಿಗಳು ಈ ವರ್ಷ ಮರು ಪರೀಕ್ಷೆ ಬರೆದಿದ್ದು, ಈ ವಿದ್ಯಾರ್ಥಿಗಳ ಫಲಿತಾಂಶ ಕೂಡಾ ನಿನ್ನೆ ಪ್ರಕಟಗೊಂಡಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ಎಡವಟ್ಟು ನಡೆದಿರುವುದು ಗಮನಕ್ಕೆ ಬಂದಿರುವ ಕುರಿತು ವರದಿಯಾಗಿದೆ. ಅದು ಮಾತ್ರವಲ್ಲದೇ ಕೆಲ ವಿದ್ಯಾರ್ಥಿಗಳಿಗೆ ಆರು ವಿಷಯಗಳಲ್ಲೂ 100 ಕ್ಕೂ ಹೆಚ್ಚು ಅಂಕಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಮಾತ್ರ ಈ ಲೋಪ ಕಾಣಿಸಿಕೊಂಡಿದ್ದು, ಡಿಜಿ ಲಾಕರ್‌ನಲ್ಲಿ ಲಭ್ಯವಿರುವ ಅದೇ ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಯಲ್ಲಿ ಅಂಕಗಳು ಸರಿಯಾಗಿರುವುದು ಗಮನಾರ್ಹವಾಗಿದೆ. ಇದರಿಂದ ವೆಬ್‌ಸೈಟ್‌ ಡೇಟಾ ಅಪ್‌ಲೋಡ್‌ ವೇಳೆ ತಾಂತ್ರಿಕ ದೋಷ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.



[ad_2]

Source link

Leave a Reply

Your email address will not be published. Required fields are marked *