Advertisement

ಪುತ್ತೂರು: ಬೈಕ್‌ ಅಪಘಾತ: ಜಾತ್ರಾ ಗದ್ದೆಯಲ್ಲಿ ಸ್ಟಾಲ್ ಹಾಕಿದ್ದ ಬೆಳ್ಳೆಪ್ಪಾಡಿಯ ಯುವಕ ಸಾವು

[ad_1]

ಪುತ್ತೂರು: ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಲೈಟ್ ಕಂಬಕ್ಕೆ ಅಪ್ಪಳಿಸಿ ಸವಾರ ಮೃತಪಟ್ಟ ಘಟನೆ ಪಡೀಲ್ ನಲ್ಲಿ ನಡೆದಿದೆ.

ಮೃತರನ್ನು ಬೆಳ್ಳಿಪ್ಪಾಡಿ ನಿವಾಸಿ ಧನರಾಜ್ (ಧನು) (21) ಎಂದು ಗುರುತಿಸಲಾಗಿದೆ.

ಧನು ಅವರು ಸ್ನೇಹಿತರ ಜೊತೆ ಸೇರಿ ಪುತ್ತೂರು ಜಾತ್ರೆಯ ಗದ್ದೆಯಲ್ಲಿ ಆಹಾರ ಸ್ಟಾಲ್ ಹಾಕಿದ್ದರು. ನಿನ್ನೆ ಮುರ ಬಳಿಯ ಸ್ನೇಹಿತನ ಮನೆಯಲ್ಲೇ ತಂಗಿದ್ದ ಧನು ಇಂದು ಬಟ್ಟೆ ಬದಲಾಯಿಸಿ ಸ್ಟಾಲ್ ಗೆ ತೆರಳಲು ಮನೆಗೆ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದರು.

ಈ ವೇಳೆ ಅವರ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್ ಹಾಗು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಇನ್ನೊಂದು ಬೈಕ್‌ ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ತಲೆಯ ಭಾಗಕ್ಕೆ ಗಂಭೀರ ಗಾಯವಾದ ಕಾರಣ ಅವರು ಅಲ್ಲೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

ಸದ್ಯ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ವರದಿಯಾಗಿದೆ.

The post ಪುತ್ತೂರು: ಬೈಕ್‌ ಅಪಘಾತ: ಜಾತ್ರಾ ಗದ್ದೆಯಲ್ಲಿ ಸ್ಟಾಲ್ ಹಾಕಿದ್ದ ಬೆಳ್ಳೆಪ್ಪಾಡಿಯ ಯುವಕ ಸಾವು appeared first on Hosakananda.

[ad_2]

Source link

Leave a Reply

Your email address will not be published. Required fields are marked *