Advertisement

Hombale : ಹೊಂಬಾಳೆ ಫಿಲ್ಮ್ಸ್ ನಿಂದ ಹೊಸ ಸಿನಿಮಾ ಘೋಷಣೆ

[ad_1]

Hombale : ರಾಜಕುಮಾರ’, ‘ಕೆಜಿಎಫ್’, ‘ಕಾಂತಾರ’ ಹಾಗೂ ‘ಸಲಾರ್’ ನಂತಹ ಅತ್ಯುತ್ತಮ ಚಿತ್ರಗಳನ್ನು ನೀಡಿರುವ ‘ಹೊಂಬಾಳೆ ಫಿಲ್ಮ್ಸ್ʼ ಈಗ ತನ್ನ ಮುಂದಿನ ಬಹುನಿರೀಕ್ಷಿತ ಸಿನಿಮಾವನ್ನ ಅಧಿಕೃತವಾಗಿ ಘೋಷಿಸಿದೆ.

ಮಹಾವತಾರ ನರಸಿಂಹ’ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಅದೇ ಸೃಜನಶೀಲ ತಂಡವು ಈಗ ಮತ್ತೆ ಒಂದಾಗುತ್ತಿದ್ದು, ಮತ್ತೊಂದು ಅದ್ಭುತ ಕಥಾಹಂದರವಾದ ‘ಮಹಾವತಾರ ಪರಶುರಾಮ’ ವನ್ನು ತೆರೆಯ ಮೇಲೆ ತರಲು ಸಜ್ಜಾಗಿದೆ. ಹೌದು, ಪರಶುರಾಮ ಜಯಂತಿಯ ಶುಭ ಸಂದರ್ಭದಲ್ಲಿ ‘ಮಹಾವತಾರ ಪರಶುರಾಮ’ ಸಿನಿಮಾ ಘೋಷಣೆಯಾಗಿದೆ. ವಿಶೇಷವೆಂದರೆ, ವಿಭಿನ್ನ ದೃಷ್ಟಿಕೋನ ಹಾಗೂ ಹೊಸತನದ ಕಥೆಯನ್ನ ಒಳಗೊಂಡಿರುವ ಈ ಚಿತ್ರವನ್ನ ಅಶ್ವಿನ್ ಅವರು ನಿರ್ದೇಶಿಸಲಿದ್ದಾರೆ. ವಿಭಿನ್ನ ದೃಷ್ಟಿಕೋನ ಹಾಗೂ ಸಂಪೂರ್ಣವಾಗಿ ಹೊಸತನದ ಕಥೆಯನ್ನ ಒಳಗೊಂಡಿರುವ ಈ ಸಿನಿಮಾ ಭಾರತೀಯ ಪರದೆಯ ಮೇಲೆ ಇದುವರೆಗೆ ಕಾಣದ ಅನುಭವ ನೀಡಲು ಸಜ್ಜಾಗಿದೆ.

‘ಮಹಾವತಾರ್ ನರಸಿಂಹ’ ರೀತಿಯಲ್ಲೇ ಈ ಚಿತ್ರವನ್ನು ತೆರೆಮೇಲೆ ತರಲಾಗುತ್ತಿದೆ. ಇದಕ್ಕಾಗಿ ಕ್ಲೀಂ ಪ್ರೊಡಕ್ಷನ್ಸ್ ಸಂಸ್ಥೆ ಜೊತೆ ಹೊಂಬಾಳೆ ಸಂಸ್ಥೆ ಮತ್ತೆ ಕೈ ಜೋಡಿಸಿದೆ. ‘ಮಹಾವತಾರ ಸಿನಿಮಾಟಿಕ್ ಯುನಿವರ್ಸ್’ನಲ್ಲೇ ಇದು ಮತ್ತೊಂದು ಕಥೆ. ಅತ್ಯಾಧುನಿಕ ಅನಿಮ್ಯಾಟಿಕ್ ತಂತ್ರಜ್ಞಾನದ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ದೃಶ್ಯ ವೈಭವದಂತೆ ಉಣಬಡಿಸುವ ಪ್ರಯತ್ನ ನಡೀತಿದೆ.

ಡಿಸೆಂಬರ್ 27ರಂದು ‘ಮಹಾವತಾರ ಪರಶುರಾಮ’ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಶ್ರೀವಿಷ್ಣುವಿನ ದಶಾವತಾರಗಳಲ್ಲಿ ಪರಶುರಾಮ ಅವತಾರ ಕೂಡ ಒಂದು. ವಿಷ್ಣುಪುರಾಣ ಸೇರಿದಂತೆ ಸಾಕಷ್ಟು ಪೌರಾಣಿಕ ಕಾವ್ಯಗಳನ್ನು ಆಧರಿಸಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ.

banner



[ad_2]

Source link

Leave a Reply

Your email address will not be published. Required fields are marked *