[ad_1]
1
ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹಣಾ ವಿಧಾನದಲ್ಲಿ ಮತ್ತೊಂದು ಹೊಸ ಪದ್ಧತಿ ಜಾರಿಗೆ ಬರಲಿದೆ. ಮುಂದಿನ ವರ್ಷ ಹೊಸ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕಳೆದ ಡಿಸೇಂಬರ್ ನಲ್ಲಿ ತಿಳಿಸಿದ್ದರು. ಈಗ ಈ ಮಹತ್ವಕಾಂಕ್ಷಿ ಯೋಜನೆ ಜಾರಿಯಾಗಿರುವ ಕಾಲ ಹತ್ತಿರವಾಗಿದೆ.


ಯಸ್, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಭರ್ಜರಿ ಸಿಹಿ ಸುದ್ದಿ ಬಂದಿದೆ. ಇನ್ಮುಂದೆ ಟೋಲ್ ಪ್ಲಾಜಾಗಳಲ್ಲಿ ನೀವು ನಿಲ್ಲುವ ಅಗತ್ಯವೇ ಇರುವುದಿಲ್ಲ. ಸರಾಗವಾಗಿ ವೇಗವಾಗಿ ಚಲಿಸಬಹುದು. ಅಂದರೆ ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪ್ಲಾಜಾ ಗಳು ಇರುವುದಿಲ್ಲ. ಹಾಗಾದರೆ ಟೋಲ್ ಕಟ್ಟಬೇಕಾಗಿಲ್ಲವೇ ಎಂಬ ಪ್ರಶ್ನೆ ನಿಮಗೆ ಬರಬಹುದು. ಮುಂದೆಯೂ ಟೋಲ್ ಕಟ್ಟಲೇಬೇಕು, ಆದರೆ, ಇಲ್ಲಿ ಟೋಲ್ ಶುಲ್ಕ ಸಂಗ್ರಹಣೆ ವಿಧಾನ ಬದಲಾಗಲಿದೆ. ಅದುವೆ ‘ಬ್ಯಾರಿಯರ್-ಫ್ರೀ’ (ತಡೆರಹಿತ) ಟೋಲ್ ಸಂಗ್ರಹ ವ್ಯವಸ್ಥೆ.
ಈ ಹೊಸ ತಂತ್ರಜ್ಞಾನವು ಪ್ರಸ್ತುತ ಇರುವ ಫಾಸ್ಟ್ಯಾಗ್ (FASTag) ವ್ಯವಸ್ಥೆಗಿಂತ ಸುಧಾರಿತವಾಗಿದ್ದು, ಮುಖ್ಯವಾಗಿ ಎರಡು ವಿಧಾನಗಳಲ್ಲಿ ಕಾರ್ಯನಿರ್ವಹಿಸಲಿದೆ. ನಿಮ್ಮ ವಾಹನದಲ್ಲಿರುವ ಜಿಪಿಎಸ್ ಸಾಧನದ ಮೂಲಕ ನೀವು ಹೆದ್ದಾರಿಯಲ್ಲಿ ಎಷ್ಟು ಕಿಲೋಮೀಟರ್ ಪ್ರಯಾಣಿಸಿದ್ದೀರಿ ಎಂಬುದನ್ನು ಲೆಕ್ಕಹಾಕಿ, ಅದಕ್ಕೆ ತಕ್ಕಂತೆ ಮಾತ್ರ ಹಣವನ್ನು ಕಡಿತಗೊಳಿಸಲಾಗುತ್ತದೆ. ಹೆದ್ದಾರಿಯ ಅಲ್ಲಲ್ಲಿ ಅಳವಡಿಸಲಾದ ಹೈ-ಸ್ಪೀಡ್ ಕ್ಯಾಮೆರಾಗಳು ಚಲಿಸುವ ವಾಹನದ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡುತ್ತವೆ. ಆ ನಂಬರ್ ಪ್ಲೇಟ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಿಂದ ಟೋಲ್ ಮೊತ್ತ ನೇರವಾಗಿ ಕಡಿತವಾಗುತ್ತದೆ. ಟೋಲ್ ಬೂತ್‌ಗಳ ಮುಂದೆ ಬ್ಯಾರಿಯರ್‌ಗಳು ಇರುವುದಿಲ್ಲ, ಹೀಗಾಗಿ ವಾಹನಗಳು ನಿಲ್ಲದೇ ವೇಗವಾಗಿ ಸಂಚರಿಸಬಹುದು. ಈ ವರ್ಷದ ಡಿಸೆಂಬರ್ ನಿಂದಲೇ ಈ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.
[ad_2]
Source link







Leave a Reply