Advertisement

ಮೇ 2ನೇ ವಾರದಲ್ಲಿ ಸಿಹಿ ಸುದ್ದಿ ಕೊಡುವ ಭರವಸೆ ಹೈಕಮಾಂಡ್ ಕೊಟ್ಟಿದೆ: ಅಶೋಕ್ ಪಟ್ಟಣ್

[ad_1]

Ashok Pattan

ಬೆಂಗಳೂರು: ಮೇ 2ನೇ ವಾರದಲ್ಲಿ ಸಿಹಿ ಸುದ್ದಿ ಕೊಡುವ ಭರವಸೆ ಹೈಕಮಾಂಡ್ ಕೊಟ್ಟಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ, ಶಾಸಕ ಅಶೋಕ್ ಪಟ್ಟಣ್ (Ashok Pattan) ತಿಳಿಸಿದ್ದಾರೆ.

ಸಚಿವ ಸಂಪುಟ ಪುನರ್ (Cabinet Reshuffle) ರಚನೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೇ ಎರಡನೇ ವಾರದಲ್ಲಿ ನಮಗೆ ಸಿಹಿ ಸುದ್ದಿ ಕೊಡುವ ಭರವಸೆಯನ್ನ ಸುರ್ಜೇವಾಲ ನೀಡಿದ್ದಾರೆ. ಅದರ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದರು. ಇದನ್ನೂ ಓದಿ: ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮಗಳು ಸಾವು – ಪತಿ ವಿರುದ್ಧ ದೂರು

ಮೇ 4ರಂದು ಪಂಚ ರಾಜ್ಯಗಳ ಚುನಾವಣೆ ರಿಸಲ್ಟ್ ಬರಲಿದೆ. ಅದಾದ ಬಳಿಕ ನಾವು 40 ಜನ ಶಾಸಕರು ದೆಹಲಿಗೆ ಹೋಗಿ ಮತ್ತೊಮ್ಮೆ ಹೈಕಮಾಂಡ್ ಭೇಟಿ ಮಾಡಿ ಬರುತ್ತೇವೆ. ಡಿಕೆ ಶಿವಕುಮಾರ್ ಅವರಿಗೆ ಬರ್ತ್ಡೇ ಸಿಹಿ ಸುದ್ದಿ ಕೊಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟಿದ್ದು. ಅವರಿಗೆ ಒಳ್ಳೇದಾಗಲಿ ಅಂತ ಹಾರೈಸುತ್ತೇನೆ. ಅವರಿಗೆ ಅಡ್ವಾನ್ಸ್ ಹುಟ್ಟುಹಬ್ಬದ ಶುಭಾಶಯಗಳು. ಸಂಪುಟ ಪುನಾರಚನೆ ಆಗಲೇ ಬೇಕು ಅನ್ನೋದು ನಮ್ಮ ಆಗ್ರಹ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಇದು ನನ್ನ ಸತ್ಯಾಗ್ರಹ – ಹಿಂದೆ ಸರಿಯಲ್ಲ ಎಂದು ಜಡ್ಜ್‌ ಹೇಳಿದ ಬೆನ್ನಲ್ಲೇ ವಿಚಾರಣೆಗೆ ಬರಲ್ಲ ಎಂದ ಕೇಜ್ರಿವಾಲ್‌

ಸಚಿವ ಡಿ ಸುಧಾಕರ್ ವಿಚಾರದಲ್ಲಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವೆಂಟಿಲೇಟರ್‌ನಲ್ಲಿ ಅವರಿದ್ದಾರೆ. ಇಂತಹ ಸಮಯದಲ್ಲಿ ಯಾರು ಹೆಬ್ಬೆಟ್ಟು ಹಾಕಿಸಿಕೊಳ್ಳುತ್ತಾರೆ? ಇಂತಹ ಸಂದರ್ಭದಲ್ಲಿ ಮಾನವೀಯತೆ ಮರೆತು ಮಾತನಾಡೋದು ಸರಿಯಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: PGCET ಅರ್ಜಿ ಸಲ್ಲಿಸಲು ಏ.30ರವರೆಗೆ ವಿಸ್ತರಣೆ – ಕೆಇಎ


[ad_2]

Source link publictv.in

Leave a Reply

Your email address will not be published. Required fields are marked *