Advertisement

ಡಿಕೆಶಿ ಭೇಟಿಯಾದ ʻಫೆಮಿನಾ ಮಿಸ್ ಇಂಡಿಯಾ 2026ʼ ವಿಜೇತೆ, ಶಾಸಕ ಸತೀಶ್‌ ಸೈಲ್‌ ಪುತ್ರಿ

[ad_1]

Sadhvi Satish Sail

ಬೆಂಗಳೂರು: ಇತ್ತೀಚೆಗಷ್ಟೇ 61ನೇ ‘ಫೆಮಿನಾ ಮಿಸ್‌ ಇಂಡಿಯಾ’ ಪಟ್ಟ ಅಲಂಕರಿಸಿದ ಕಾರವಾರ ಶಾಸಕ ಸತೀಶ್‌ ಕೃಷ್ಣ ಸೈಲ್‌ ಅವರ ಪುತ್ರಿ ಸಾಧ್ವಿ ಸೈಲ್‌ (Sadhvi Satish Sail) ಅವರಿಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರನ್ನು ಭೇಟಿಯಾಗಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಸಾಧ್ವಿ ಸೈಲ್ ಅವರಿಗೆ ಡಿಸಿಎಂ ಅಭಿನಂದಿಸಿದ್ದಾರೆ. ಅಲ್ಲದೇ 2027ರ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಸಾಧ್ವಿ ಅವರು ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿಯೂ ಗೆಲುವು ಸಾಧಿಸಿ ನಾಡಿಗೆ ಹಾಗೂ ದೇಶಕ್ಕೆ ಮತ್ತಷ್ಟು ಕೀರ್ತಿಯನ್ನು ತರುವಂತಾಗಲಿ ಎಂದು ಶುಭ ಹಾರೈಸಿದ್ದಾರೆ. ಇದನ್ಮೂ ಓದಿ: ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು

Sadhvi Satish Sail 2

ಗೋವಾ ಪ್ರತಿನಿಧಿಸಿದ ಸಾಧ್ವಿ
ಏಪ್ರಿಲ್‌ 18ರಂದು ಒಡಿಶಾದ ಭುವನೇಶ್ವರದ ‘ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ’ ಆವರಣದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಸಾಧ್ವಿ ಗೆದ್ದು ಬೀಗಿದ್ದರು. ಕರ್ನಾಟಕದ ಕಾರವಾರದ ಸಾಧ್ವಿ ಸತೀಸ್‌ ಸೈಲ್‌ ಅವರು ಗೋವಾ ರಾಜ್ಯವನ್ನ ಪ್ರತಿನಿಧಿಸಿದ್ದರು. ‘ಫೆಮಿನಾ ಮಿಸ್‌ ಇಂಡಿಯಾ’ದಲ್ಲಿ ಗೋವಾ ರಾಜ್ಯವನ್ನ ಪ್ರತಿನಿಧಿಸಿ ಕ್ರೌನ್‌ ಧರಿಸಿದ್ದರು. ಒಟ್ಟು 30 ಸ್ಪರ್ಧಿಗಳು ಭಾಗಿಯಾಗಿದ್ದರು. 29 ಸ್ಪರ್ಧಿಗಳನ್ನ ಹಿಂದಿಕ್ಕಿ ಸಾಧ್ವಿ ಸಾಧನೆ ಮಾಡಿದ್ದರು. ಇದನ್ಮೂ ಓದಿ: ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?

Sadhvi Satish Sail

ಓದಿನೊಂದಿಗೆ ಕ್ರೀಡೆಯಲ್ಲೂ ಆಸಕ್ತಿ
ಕಾರವಾರ ಶಾಸಕ ಸತೀಶ್‌ ಕೃಷ್ಣ ಸೈಲ್‌ ಅವರ ಮಗಳು ಸಾಧ್ವಿ ಸೈಲ್‌ ಅವರು ಮಾಡೆಲಿಂಗ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಜೊತೆಗೆ ಓದು, ವಿದ್ಯಾಭ್ಯಾಸದಲ್ಲೂ ಮುಂದಿದ್ದಾರೆ. ಕೆನಡಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವಿ ಪೂರೈಸಿದ್ದಾರೆ. ಕ್ರೀಡೆಯಲ್ಲೂ ಆಸಕ್ತಿ ಹೊಂದಿರುವ ಸಾಧ್ವಿ ಅವರು ಬ್ಯಾಡ್ಮಿಂಟನ್‌ ನಲ್ಲಿ ಆಸಕ್ತಿ ಹೊಂದಿದ್ದಾರೆ. ಇದನ್ಮೂ ಓದಿ: ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು



[ad_2]

Source link publictv.in

Leave a Reply

Your email address will not be published. Required fields are marked *