Advertisement

ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಗೆಲುವು – ಮೋದಿ, ಅಮಿತ್ ಶಾರನ್ನ ಹೊಗಳಿದ ಶಶಿ ತರೂರ್

[ad_1]

Shashi Tharoor 1

– ಕಾಂಗ್ರೆಸ್‌ಗೆ ಆತ್ಮಾವಲೋಕನದ ಅಗತ್ಯವಿದೆ

ನವದೆಹಲಿ: ನರೇಂದ್ರ ಮೋದಿ (Narendra Modi) ಮತ್ತು ಅಮಿತ್ ಶಾ (Amit Shah) ಅವರ ಚುನಾವಣಾ ತಂತ್ರಗಳು ವಿಶೇಷವಾಗಿ ಪಶ್ಚಿಮ ಬಂಗಾಳ (West Bengal) ಮತ್ತು ಅಸ್ಸಾಂ (Assam) ರಾಜ್ಯಗಳಲ್ಲಿ ಉತ್ತಮವಾಗಿತ್ತು ಎಂದು ಸಂಸದ ಶಶಿ ತರೂರ್ ಹೊಗಳಿದ್ದಾರೆ.

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮೋದಿ ಮತ್ತು ಅಮಿತ್ ಶಾ ಚುನಾವಣೆಗಳನ್ನು ಅತ್ಯಂತ ವೃತ್ತಿಪರವಾಗಿ ನಡೆಸುತ್ತಾರೆ. ಬಲವಾದ ಸಂಘಟನೆ ಮತ್ತು ಸಾಕಷ್ಟು ಸಂಪನ್ಮೂಲಗಳಿವೆ. ಅದರಿಂದ ಎಲ್ಲರೂ ಕಲಿಯಬೇಕಾದ ವಿಷಯಗಳಿವೆ. ಆದರೆ ರಾಜಕೀಯ ಸಂದೇಶಗಳು ಜನರನ್ನು ಒಂದಾಗಿಸುವಂತಿರಬೇಕು. ಭಾರತೀಯರನ್ನು ವಿಭಜಿಸುವುದಕ್ಕಿಂತ ಒಂದಾಗಿಸುವ ಸಂದೇಶವೇ ಇರಲಿ ಎಂದು ನಾನು ಆಶಿಸುತ್ತೇನೆ ಎಂದರು. ಇದನ್ನೂ ಓದಿ: ತಮಿಳುನಾಡು ಫಲಿತಾಂಶ ಆಶ್ಚರ್ಯಕರವಾಗಿದೆ: ಸಿದ್ದರಾಮಯ್ಯ

AMIT SHAH NARENDRA MODI

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮಿಶ್ರ ಫಲಿತಾಂಶಗಳ ಹಿನ್ನೆಲೆ ಕಾಂಗ್ರೆಸ್ ಪಕ್ಷ ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷವು ತನ್ನ ತಂತ್ರಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕು ಎಂದು ನುಡಿದರು. ಇದನ್ನೂ ಓದಿ: ಹೈಕಮಾಂಡ್ ಹಂತದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆಗಿಲ್ಲ: ಆರ್.ಬಿ.ತಿಮ್ಮಾಪುರ್

ಇದೇ ವೇಳೆ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿ, ಎಲ್‌ಡಿಎಫ್ ಆಡಳಿತದ 10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬಂದಿರುವುದನ್ನು ಅವರು ಸ್ವಾಗತಿಸಿದರು. ಆದರೆ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಪಕ್ಷದ ಸಾಧನೆ ನಿರಾಶಾದಾಯಕವಾಗಿದೆ. ಕೇರಳದ ರೀತಿಯಲ್ಲಿ ಬೇರೆಡೆ ಹೇಗೆ ಯಶಸ್ಸು ಸಾಧಿಸಬಹುದು ಎಂಬುದನ್ನು ಕಲಿಯಬೇಕು ಎಂದು ಹೇಳಿದರು. ಇದನ್ನೂ ಓದಿ: ಪಂಚಮಸಾಲಿ ಪೀಠದಲ್ಲಿ ಸಭೆ, ಸಮಾರಂಭ ಮಾಡದಂತೆ ಒಂದು ತಿಂಗಳ ಕಾಲ ನಿಷೇಧಾಜ್ಞೆ ಜಾರಿ


[ad_2]

Source link publictv.in

Leave a Reply

Your email address will not be published. Required fields are marked *