[ad_1]
1
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ಇದೀಗ ಗುಜರಾತಿನ ಅಹಮದಾಬಾದಿಗೆ ಶಿಫ್ಟ್ ಆಗಿದೆ. ಈ ರೀತಿ ಐಪಿಎಲ್ ಫೈನಲ್ ಪಂದ್ಯ ಶಿಫ್ಟ್ ಆಗಲು ಕರ್ನಾಟಕದಲ್ಲಿ ಇಟ್ಟ ಫ್ರೀ ಟಿಕೆಟ್ ಬೇಡಿಕೆಯೇ ಕಾರಣ ಎಂದು ಬಿಸಿಸಿಐ ಹೇಳಿದೆ.


ಗುವಾಹಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಸಿಸಿಐ (BCCI) ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಬೆಂಗಳೂರಿನಿಂದ ಪಂದ್ಯ ಶಿಫ್ಟ್ ಆಗಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಬೇಡಿಕೆ ಇಟ್ಟ ಹೆಚ್ಚುವರಿ ಉಚಿತ ಟಿಕೆಟ್‌ಗಳೇ ಈ ಬದಲಾವಣೆಗೆ ಮೂಲ ಕಾರಣ. ಉಚಿತ ಟಿಕೆಟ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಕಾರಣ, ಅನಿವಾರ್ಯವಾಗಿ ಬೆಂಗಳೂರಿನಿಂದ ಫೈನಲ್ ಪಂದ್ಯದ ಆತಿಥ್ಯವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಸೈಕಿಯಾ ತಿಳಿಸಿದ್ದಾರೆ.
ಕರ್ನಾಟಕದ ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಒಬ್ಬರು ರಾಜ್ಯದ ಎಮ್ಎಲ್ಎ ಗಳಿಗೆ ಐಪಿಎಲ್ ವೀಕ್ಷಿಸಲು ಉಚಿತ ಟಿಕೇಟ್ ನೀಡಬೇಕು ನಾವು ವಿಐಪಿ ಗಳು ಸಾಮಾನ್ಯರ ಜೊತೆ ಕೂರಲು ಸಾಧ್ಯವಿಲ್ಲ ಎಂದು ಹೇಳಿದ್ದರು ಹೀಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಎದುರು ಉಚಿತ ಟಿಕೆಟ್ ಗಾಗಿ ಡಿಮ್ಯಾಂಡ್ ಮಾಡಿದೆ. ಇದಕ್ಕೆ ಒಪ್ಪದ ಸಂಸ್ಥೆ ಪಂದ್ಯವನ್ನೇ ಬೆಂಗಳೂರಿನಿಂದ ಶಿಫ್ಟ್ ಮಾಡಿದೆ. ಒಟ್ಟಾರೆ ಬೆಂಗಳೂರಿನಿಂದ ಐಪಿಎಲ್ ಮ್ಯಾಚ್ ಶಿಫ್ಟ್ ಆಗಲು ಒಂದು ರೀತಿ ಕರ್ನಾಟಕದ ಶಾಸಕರು ಕೂಡ ನೇರ ಕಾರಣ ಎನ್ನಬಹುದು.
[ad_2]
Source link








Leave a Reply