Advertisement

ಕೊಲೆ ಮಾಡಿ ಜೈಲು ಸೇರಿದ್ದ ಕೈದಿಯ ಮೇಲೆ ಮಹಿಳಾ ಜೈಲಾಧಿಕಾರಿಗೆ ಲವ್

[ad_1]

ಹೊರಗಡೆ ಅನೇಕ ಅಪರಾಧಗಳನ್ನು ಎಸೆಗಿ ಜೈಲಿಗೆ ಬಂದು ಸೇರುವ ಕೈದಿಗಳನ್ನು ನೋಡಿಕೊಳ್ಳುವುದು ಜೈಲಾಧಿಕಾರಿಗಳಿಗೆ ದೊಡ್ಡ ಹರಸಾಹಕವಾಗಿರುತ್ತದೆ. ಅಂತದರಲ್ಲಿ ಇಲ್ಲೊಬ್ಬ ಕೊಲೆ ಮಾಡಿ ಜೈಲು ಸೇರಿದ್ದು, ಆತನ ಮೇಲೆ ಮಹಿಳಾ ಜೈಲಾಧಿಕಾರಿಗೆ ಲವ್ ಆಗಿದೆ. ಅಷ್ಟೇ ಅಲ್ಲ ಇಬ್ಬರಿಗೂ ಅದ್ಧೂರಿಯಾಗಿ ಮದುವೆಯೂ ನೆರವೇರಿದೆ 

ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ಸೆಂಟ್ರಲ್ ಜೈಲಿನಲ್ಲಿ ಈ ಘಟನೆ ನಡೆದಿದ್ದು, ಸಾತ್ನಾ ಸೆಂಟ್ರಲ್ ಜೈಲು ಉಪ ಅಧೀಕ್ಷಕಿ ಫೀರೋಜಾ ಖಾತೂನ್ ಎನ್ನುವರು ಕೊಲೆ ಕೇಸ್‌ ಅಡಿ 14 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೈದಿ  ಮಧ್ಯಪ್ರದೇಶದ ಛತ್ತರ್‌ಪುರ್ ಜಿಲ್ಲೆಯ ಚಾಂಡ್ಲಾದ ಧರ್ಮೆಂದ್ರ ಸಿಂಗ್ ಎನ್ನುವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

2007 ರಲ್ಲಿ ಚಾಂಡ್ಲಾದ ರಾಜಕಾರಣಿಯೊಬ್ಬರ ಕೊಲೆ ಮಾಡಿ ಹೂತು ಹಾಕಿದ್ದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿ 2024ರವರೆಗೆ ಧರ್ಮೆಂದ್ರ ಸಿಂಗ್ ಸಾತ್ನಾ ಸೆಂಟ್ರಲ್ ಜೈಲಿನಲ್ಲಿದ್ದ. ಧರ್ಮೆಂದ್ರ ಬಿಡುಗಡೆಗೂ ಮುನ್ನ ಕೆಲ ವರ್ಷಗಳ ಹಿಂದೆ ಸಾತ್ನಾ ಜೈಲಿಗೆ ಫೀರೋಜಾ ಖಾತೂನ್ ಉಪ ಜೈಲು ಅಧೀಕ್ಷಕಿಯಾಗಿ ನಿಯೋಜನೆಗೊಂಡಿದ್ದರು. ಜೈಲಲ್ಲಿ ಫೀರೋಜಾ ಅವರಿಗೆ ವಾರಂಟ್ ವಿಭಾಗದ ಕೆಲಸವನ್ನು ನೀಡಲಾಗಿತ್ತು. ಈ ಕೆಲಸದಲ್ಲಿ ಫೀರೋಜಾ ಅವರಿಗೆ ಧರ್ಮೆಂದ್ರ ಆಗಾಗ ಸಹಾಯ ಮಾಡುತ್ತಿದ್ದ.

ಈ ಸಂಪರ್ಕವೇ ಕ್ರಮೇಣ ಇಬ್ಬರಲ್ಲೂ ಪ್ರೀತಿ ಚಿಗುರಲು ಕಾರಣವಾಗಿದೆ. ಪ್ರೀತಿ ಚಿಗುರಿ ಈಗ ಹೆಮ್ಮರವಾಗಿದೆ. ಈ ವೇಳೆಗೆ ಸನ್ನಡತೆ ಆಧಾರದಲ್ಲಿ ಧರ್ಮೆಂದ್ರ ಸಿಂಗ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ.

banner

ಮೇ 5 ರಂದು ಛತ್ತರ್‌ಪುರ್ ಜಿಲ್ಲೆಯಲ್ಲಿ ಈ ಇಬ್ಬರ ವಿವಾಹ ಹಿಂದೂ ಸಂಪ್ರದಾಯದಂತೆ ನೆರವೇರಿದೆ. ಈ ಮದುವೆಗೆ ಫೀರೋಜಾ ಮನೆಯವರ ವಿರೋಧವಿತ್ತು. ಕಡೆಗೆ ಭಜರಂಗದಳದ ಕಾರ್ಯಕರ್ತರು ಮುಂದೆ ನಿಂತು ಈ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ.



[ad_2]

Source link

Leave a Reply

Your email address will not be published. Required fields are marked *