Advertisement

ಸಿದ್ದರಾಮಯ್ಯಗೆ ಮುಲ್ಲಾಗಳ ಮೇಲೆ ಬಹಳ ಪ್ರೀತಿ, ಮುಸ್ಲಿಮರಿಗೆ ಭರಪೂರ ಅವಕಾಶ: ಅಶೋಕ್‌ ಲೇವಡಿ

[ad_1]

R Ashok 3 1

– ಕೇಸರಿ ಶಾಲು ನಮ್ಮ ಧರ್ಮದ ಸಂಕೇತ ಎಂದ ವಿಪಕ್ಷ ನಾಯಕ

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮುಸ್ಲಿಮರಿಗೆ ಭರಪೂರ ಅವಕಾಶ ಕೊಡ್ತಾರೆ, ಹಿಂದೂಗಳನ್ನ ಕಡೆಗಣಿಸ್ತಾರೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಲೇವಡಿ ಮಾಡಿದ್ದಾರೆ.

ಶಾಲೆಗಳಲ್ಲಿ ಹಿಜಬ್‌ (Hijab) ಧರಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರದ ಆದೇಶವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಿದ್ದರಾಮಯ್ಯ ಅಂದ್ರೇ ಮುಸ್ಲಿಮರಿಗೆ ಭರಪೂರ ಅವಕಾಶಗಳು. ಸಿದ್ದರಾಮಯ್ಯನವರು ಹಿಂದೂಗಳನ್ನ ಕಡೆಗಣಿಸ್ತಾರೆ, ಹಿಂದೂಗಳಿಗೆ ಅವಮಾನ ಮಾಡ್ತಾರೆ. ಜನಿವಾರ ಕಂಡ್ರೇ ಆಗಲ್ಲ, ಬೊಟ್ಟು ಇಟ್ಟುಕೊಂಡ್ರೇ ಆಗಲ್ಲ, ದೇವಸ್ಥಾನಕ್ಕೆ ಹೋದ್ರೇ ಆಗಲ್ಲ. ಆದ್ರೇ ಮುಲ್ಲಾಗಳ ಮೇಲೆ ಬಹಳ ಪ್ರೀತಿ. ನಮ್ಮ ಸರ್ಕಾರ ಇದ್ದಾಗ ಬ್ಯಾನ್ ಮಾಡಿದ್ದ ಹಿಜಬ್‌ ಅನ್ನು ಜಾರಿಗೆ ತಂದಿರೋದು ವೋಟ್ ಬ್ಯಾಂಕಿಗೋಸ್ಕರ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದು ಮುಸ್ಲಿಮರ ಅತಿಯಾದ ಒಲೈಕೆ, ಪಶ್ಚಿಮ ಬಂಗಾಳದಲ್ಲಿ (West Bengal) ಮಮತಾ ಬ್ಯಾನರ್ಜಿ ಇದೇ ತರ ಒಲೈಕೆ ಮಾಡಿ ಸೋತು ಮನೆ ಸೇರಿದ್ರು. ಹಿಂದೂಗಳನ್ನ ಬೈಯದು ಸ್ಟಾಲೀನ್ ಸೋತು ಹೋದರು. ಯಾರ್ಯಾರು ಹಿಂದೂಗಳನ್ನ ಟೀಕೆ, ಅನ್ಯಾಯ ಮಾಡ್ತಾರೋ, ಅಂಥವರನ್ನ ಇಡೀ ಹಿಂದೂ ಸಮುದಾಯ ಒಟ್ಟಿಗೆ ನಿಂತು ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

Siddaramaiah 15

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಎಲ್ಲಾ ಶಾಸಕರಿಗೆ ಹಿಂದೂಗಳು ಸರಿಯಾದ ಪಾಠ ಕಲಿಸ್ತಾರೆ. ಇದು ಹಿಂದೂ ವಿರೋಧಿ ಸರ್ಕಾರ, ಹಿಂದೂಗಳಿಗೆ ದ್ರೋಹ, ವಂಚನೆ ಮಾಡ್ತಾ ಇದ್ದಾರೆ. 800-900 ಕೋಟಿ ಅನುದಾನವನ್ನ ಮುಸ್ಲಿಮರಿಗೆ ಕೊಟ್ರು. ಈ ರೀತಿ ತಾರತಮ್ಯ ಮಾಡುತ್ತಿರೋ ಸಿದ್ದರಾಮಯ್ಯ ವೋಟಿಗೊಸ್ಕರ ಏನೂ ಬೇಕಾದರೂ ಮಾಡಲು ಸಿದ್ದ ಅನ್ನೋದನ್ನ ತೋರಿಸ್ತಾ ಇದ್ದಾರೆ ಎಂದಿದ್ದಾರೆ.

ಕೇಸರಿ ಶಾಲು ಅದು ನಮ್ಮ ಧರ್ಮದ ಸಂಕೇತ, ಕರ್ನಾಟಕದ ಎಲ್ಲಾ ಸ್ವಾಮಿಗಳು ಕೇಸರಿ ಬಟ್ಟೆ ಹಾಕಿಕೊಳ್ಳೋದು. ಅವರಿಗೆ ಹೋಗಿ ನಮಸ್ಕಾರ ಹಾಕ್ತೀರಾ. ವೋಟ್‌ಗೆ ಬಂದಾಗ ಸ್ವಾಮಿಗಳ ಬಳಿ ಹೋಗಿ ನಮಸ್ಕಾರ ಹಾಕ್ತೀರ. ಈಗ ಮಾತ್ರ ಕೇಸರಿ ಬೇಡ, ವೋಟ್ ಬೇಕಾದಾಗ ಸುತ್ತೂರು, ಆದಿಚುಂಚನಗಿರಿ, ದಲಿತ ಮಠಕ್ಕೆ ಹೋಗ್ತೀರ. ಇದು ಹಿಂದೂಗಳ ಬೆನ್ನಿಗೆ ಚೂರಿ ಹಾಕುವಂತಹ ಸರ್ಕಾರ. ಈ ಸರ್ಕಾರ ತೊಲಗಬೇಕು. ರಾಜ್ಯದ ಜನ ಹಿಂದೂ ವಿರೋಧಿ ಸರ್ಕಾರವನ್ನ ಜನ ಕಿತ್ತೊಗೆಯುತ್ತಾರೆ. ಬಿಜೆಪಿ ಪಾರ್ಟಿಯ ಎಲ್ಲಾ ಮುಖಂಡರ ಜೊತೆ ಚರ್ಚಿಸಿ, ಇದರ ವಿರುದ್ಧ ಹೋರಾಟ ಮಾಡತ್ತೇವೆ ಎಂದು ಹೇಳಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *