Advertisement

ಕೇವಲ 45 ದಿನದಲ್ಲೇ ಬಾಯ್ಲರ್ ಕೋಳಿ ಬೆಳೆಯಲು ಕಾರಣವೇನು

[ad_1]

ಚಿಕನ್ ಪ್ರಿಯರಲ್ಲಿ ಅನೇಕರಿಗೆ ಬಾಯ್ಲರ್ ಕೋಳಿ ಎಂದರೆ ಬಲು ಪ್ರೀತಿ. ರುಚಿ ಆಗಿರುವುದು ಮಾತ್ರವಲ್ಲದೆ ಹತ್ತು ನಿಮಿಷದಲ್ಲಿ ಬೆಂದು ತಿನ್ನಲು ರೆಡಿಯಾಗುತ್ತದೆ. ಆದರೆ ಈ ಬಾಯ್ಲರ್ ಕೋಳಿಯ ಬಗ್ಗೆ ಹಲವಾರು ಅಪವಾದಗಳಿವೆ. ಈ ಕೋಳಿ ಮೊಟ್ಟೆ ಇಡುವುದಿಲ್ಲ, ಇಂಜೆಕ್ಷನ್ ಕೊಟ್ಟು ಇದನ್ನು ಬೆಳೆಸುತ್ತಾರೆ, ಇದನ್ನು ತಿಂದರೆ ಆರೋಗ್ಯಕ್ಕೆ ಕೆಟ್ಟದ್ದು ಅಂತ ಜನ ಹೆದರುತ್ತಾರೆ ಎಂದೆಲ್ಲಾ ಹೇಳಲಾಗುತ್ತದೆ. ಇದೀಗ ಬಾಯ್ಲರ್ ಕೋಳಿ ಕೇವಲ 45 ದಿನದಲ್ಲಿ ಬೆಳೆಯಲು ಕಾರಣವೇನು ಎಂಬ ವಿಚಾರವನ್ನು ಚರ್ಚೆಯಾಗುತ್ತಿದೆ.

ಹೌದು, ಇದೀಗ ಬ್ರಾಯ್ಲರ್ ಚಿಕನ್ ತಿನ್ನಬಾರದು, ನಾಟಿ ಕೋಳಿ ಮಾತ್ರ ತಿನ್ನಬೇಕು ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಬ್ರಾಯ್ಲರ್ ಕೋಳಿಗಳಿಗೆ ಗ್ರೋತ್ ಹಾರ್ಮೋನ್ ನೀಡುತ್ತಾರೆ, ಇದರಿಂದಾಗಿ 8 ವರ್ಷಕ್ಕೇ ಹೆಣ್ಣುಮಕ್ಕಳು ದೊಡ್ಡವರಾಗುತ್ತಾರೆ, ಬೇರೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಹಲವರು ನಂಬುತ್ತಾರೆ. ಇದರಲ್ಲಿ ಸತ್ಯವಿದೆಯೇ? ಈ ಕೋಳಿಗಳು ಅಷ್ಟು ಬೇಗ ಹೇಗೆ ಬೆಳೆಯುತ್ತವೆ? 

ಬ್ರಾಯ್ಲರ್ ಕೋಳಿಗಳು ವೇಗವಾಗಿ ಬೆಳೆಯಲು ಗ್ರೋತ್ ಹಾರ್ಮೋನ್ ನೀಡುತ್ತಾರೆ ಎನ್ನುವುದು ಕೇವಲ ಒಂದು ಸುಳ್ಳು ಸುದ್ದಿ ಎಂದು ಹ್ಯೂಮನ್ ಲೀಗ್ ವರದಿ ಹೇಳುತ್ತದೆ.  ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪಳನಿಯಪ್ಪನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, ‘ಬ್ರಾಯ್ಲರ್ ಕೋಳಿಗಳ ಬಗ್ಗೆ ಜನರಲ್ಲಿರುವುದು ಕೇವಲ ಭಯ. ಅವುಗಳ ವೇಗದ ಬೆಳವಣಿಗೆಗೆ ಯಾವುದೇ ಕೃತಕ ಹಾರ್ಮೋನ್ ಬಳಸುವುದಿಲ್ಲ. ಅಲ್ಲದೆ ಪ್ರತಿ ಕೋಳಿಗೆ ಪ್ರತಿದಿನ ಇಂಜೆಕ್ಷನ್ ನೀಡುವುದು ಸಾಧ್ಯವಿಲ್ಲ. ಒಂದು ವೇಳೆ ಆಹಾರದ ಮೂಲಕ ಹಾರ್ಮೋನ್ ನೀಡಿದರೂ, ಜೀರ್ಣಾಂಗ ವ್ಯವಸ್ಥೆಯು ಅದನ್ನು ಸಾಮಾನ್ಯ ಪ್ರೋಟೀನ್‌ನಂತೆ ಜೀರ್ಣಿಸಿಕೊಳ್ಳುತ್ತದೆ. ಇದರಿಂದ ಯಾವುದೇ ಪರಿಣಾಮ ಇರುವುದಿಲ್ಲ’ ಎಂದು ವಿವರಿಸಿದ್ದಾರೆ. 

ಹಾಗಾದರೆ, ಯಾವುದೇ ಇಂಜೆಕ್ಷನ್ ಇಲ್ಲದೆ ಬ್ರಾಯ್ಲರ್ ಕೋಳಿಗಳು ಇಷ್ಟು ವೇಗವಾಗಿ ಹೇಗೆ ಬೆಳೆಯುತ್ತವೆ ಎಂಬ ಅನುಮಾನ ಬರಬಹುದು. ಆರ್ಗಾನಿಕ್ ಫೀಡ್ಸ್’ ಪ್ರಕಾರ, ಬ್ರಾಯ್ಲರ್ ಕೋಳಿಗಳು ಸಾಮಾನ್ಯ ನಾಟಿ ಕೋಳಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ತಳಿ. ಈ ತಳಿಯ ಕೋಳಿಗಳು ವೇಗವಾಗಿ, ಅಂದರೆ ಸುಮಾರು 45 ದಿನಗಳಲ್ಲಿಯೇ ಸಂಪೂರ್ಣವಾಗಿ ಬೆಳೆಯುತ್ತವೆ. ದಶಕಗಳಿಂದ ಪೌಲ್ಟ್ರಿ ತಜ್ಞರು ಆರೋಗ್ಯಕರ ಮತ್ತು ವೇಗವಾಗಿ ಬೆಳೆಯುವ ಕೋಳಿಗಳನ್ನೇ ಆಯ್ದು ಸಾಕುತ್ತಿದ್ದಾರೆ (Selective breeding). ಇವುಗಳಿಗೆ ಪ್ರೋಟೀನ್, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಹೆಚ್ಚಿರುವ ಸಮತೋಲಿತ ಆಹಾರವನ್ನು ನೀಡುತ್ತಾರೆ. ಇದೇ ಕಾರಣಕ್ಕೆ ಅವು ಬೇಗನೆ ತೂಕ ಹೆಚ್ಚಿಸಿಕೊಳ್ಳುತ್ತವೆ.

banner



[ad_2]

Source link

Leave a Reply

Your email address will not be published. Required fields are marked *