Advertisement

Falta Election Result| 30 ಸಾವಿರ ಮತಗಳ ಮುನ್ನಡೆಯಲ್ಲಿ ಬಿಜೆಪಿ, 4ನೇ ಸ್ಥಾನಕ್ಕೆ ಜಾರಿದ ಟಿಎಂಸಿ

[ad_1]

alta Election Result BJP Debangshu Panda leads by 30 thousand votes TMC Jahangir Khan slips to 4th position

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ದಕ್ಷಿಣ 24 ಪರಗಣ ಜಿಲ್ಲೆಯ ಹೈ-ವೋಲ್ಟೇಜ್ ಕ್ಷೇತ್ರವಾದ ಫಾಲ್ಟಾ(Falta) ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಿಜೆಪಿಯ (BJP) ಅಭ್ಯರ್ಥಿ ದೇಬಾಂಶು ಪಾಂಡಾ ಅವರು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಭಾರಿ ಮುನ್ನಡೆ ಸಾಧಿಸಿದ್ದಾರೆ. ಸದ್ಯದ ಟ್ರೆಂಡ್‌ಗಳ ಪ್ರಕಾರ ಅವರು ಸುಮಾರು 31 ಸಾವಿರ ಮತಗಳ ಬೃಹತ್ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಒಟ್ಟು 21 ಸುತ್ತುಗಳ ಮತ ಎಣಿಕೆ ನಡೆಯಬೇಕಾಗಿದ್ದು ಬೆಳಗ್ಗೆ 11:45ಕ್ಕೆ 8 ಸುತ್ತುಗಳ ಪ್ರಕ್ರಿಯೆ ಪೂರ್ಣಗೊಂಡಿದೆ. ದೇಬಾಂಶು ಪಾಂಡಾ(Debangshu Panda) 51,621 ಮತಗಳನ್ನು ಪಡೆದರೆ ಸಿಪಿಎಂನ ಶಂಭು ನಾಥ್ ಕುರ್ಮಿ 20,556 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಅಬ್ದುರ್ ರಜಾಕ್ ಮೊಲ್ಲಾ 5,205, ಟಿಎಂಸಿಯ ಜಹಾಂಗೀರ್ ಖಾನ್ 2,570 ಮತಗಳನ್ನು ಪಡೆದಿದ್ದಾರೆ.

ಕಳೆದ ಏಪ್ರಿಲ್ 29ರಂದು ಈ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ನಡೆದಿತ್ತು. ಆದರೆ ಆ ಸಮಯದಲ್ಲಿ ಇವಿಎಂ (EVM) ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಂಡ ಚುನಾವಣಾ ಆಯೋಗವು ಇಡೀ ಕ್ಷೇತ್ರದ ಮತದಾನವನ್ನು ರದ್ದುಪಡಿಸಿತ್ತು. ತದನಂತರ ಮೇ 21 ರಂದು ಕಟ್ಟುನಿಟ್ಟಿನ ಭದ್ರತೆಯ ನಡುವೆ ಮರುಮತದಾನ ನಡೆಸಲಾಗಿತ್ತು.

ಮರುಮತದಾನದ ಪ್ರಚಾರದ ಕೊನೆಯ ದಿನವಾದ ಮೇ 19 ರಂದು ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ (Jahangir Khan) ಅವರು ಅಚ್ಚರಿಯ ರೀತಿಯಲ್ಲಿ ತಾವಿನ್ನು ಚುನಾವಣಾ ಕಣದಲ್ಲಿ ಇರುವುದಿಲ್ಲ ಎಂದು ಘೋಷಿಸಿ ಹಿಂದೆ ಸರಿದಿದ್ದರು. ಈ ರಾಜಕೀಯ ಬೆಳವಣಿಗೆಯೂ ಸಹ ಸದ್ಯದ ಫಲಿತಾಂಶದ ಮೇಲೆ ಭಾರಿ ಪ್ರಭಾವ ಬೀರಿದಂತಿದೆ.

ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಫಾಲ್ಟಾ ಕ್ಷೇತ್ರದಲ್ಲಿ ಕಮಲ ಅರಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಅಧಿಕೃತ ಪ್ರಕಟಣೆಗೆ ಇನ್ನು ಕೆಲವು ಸುತ್ತುಗಳ ಮತ ಎಣಿಕೆ ಬಾಕಿ ಉಳಿದಿದೆ.



[ad_2]

Source link publictv.in

Leave a Reply

Your email address will not be published. Required fields are marked *