Advertisement

ಸತ್ತವರ ಹೆಸರಲ್ಲೂ ಹಣ, ಅರ್ಹತೆ ಮೀರಿದವರಿಗೂ ವಿದ್ಯುತ್‌ – ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೆ ನಿರ್ಧಾರ

[ad_1]

Guaranatee Scheme

ಬೆಂಗಳೂರು: ಪಂಚ ಗ್ಯಾರಂಟಿಗಳ (Guarantee Scheme) ಮೇಲೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಈಗ 2 ಮಹತ್ವದ ಗ್ಯಾರಂಟಿಗಳಾದ ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳ ಪರಿಷ್ಕರಣೆಗೆ ನಿರ್ಧರಿಸಿದೆ.

ಇಂದು ನಡೆದ ಶಾಸಕರು ಹಾಗೂ ಹಿರಿಯ ನಾಯಕರ ಸಭೆಯಲ್ಲಿ ಈ ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ. ಗೃಹಲಕ್ಷ್ಮಿ (Gruhalakshmi Scheme) ಹಾಗೂ ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: ಕುರ್ಚಿ ಕದನದ ಗ್ರ್ಯಾಂಡ್ ಫಿನಾಲೆಗೆ ಕೊನೆಗೂ ಮುಹೂರ್ತ – ಸಿಎಂ, ಡಿಸಿಎಂಗೆ ಹೈಕಮಾಂಡ್‌ ಬುಲಾವ್‌

Congress Guarantee 3

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿತಿಂಗಳು 1 ಕೋಟಿ 64 ಲಕ್ಷ ಮಹಿಳೆಯರು 2,000 ರೂ. ಹಣ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಲ್ಲೂ 1 ಕೋಟಿ 67 ಲಕ್ಷ ಫಲಾನುಭವಿಗಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಅರ್ಹತೆ ಮೀರಿದವರು ಜೊತೆಗೆ ಸತ್ತವರ ಹೆಸರಿನಲ್ಲೂ ಹಣ ಪಡೆಯಲಾಗುತ್ತಿದೆ ಎಂಬ ಮಾಹಿತಿ ಇದೆ. ಗೃಹ ಜ್ಯೋತಿ ಯೋಜನೆಯಲ್ಲೂ ಬಹುತೇಕ ಅರ್ಹತೆ ಮೀರಿದವರು ಫಲಾನುಭವಿಗಳಾಗುತ್ತಿದ್ದಾರೆ ಅನ್ನೋ ಮಾಹಿತಿ ಇದೆ. ಅದೇ ಕಾರಣಕ್ಕೆ ಎರೆಡು ಯೋಜನೆಯ ಪರಿಷ್ಕರಣೆಗೆ ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದನ್ನೂ ಓದಿ: Exclusive | ಸತ್ತವರ ಖಾತೆಗೆ 79 ಕೋಟಿ ಗೃಹಲಕ್ಷ್ಮಿ ಹಣ ಜಮೆ – 2.30 ಲಕ್ಷ ಫಲಾನುಭವಿಗಳ ಅಕೌಂಟ್ ಬ್ಲಾಕ್‌!

ಇತ್ತೀಚೆಗಷ್ಟೇ ಜೆಡಿಎಸ್‌ ಯುವಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಗೃಹಲಕ್ಷ್ಮಿ ಹಣದಲ್ಲಿ 5,000 ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಇದಾದ 2 ದಿನಗಳಲ್ಲೇ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

[ad_2]

Source link publictv.in

Leave a Reply

Your email address will not be published. Required fields are marked *