Advertisement

ಕೋಲಾರದಲ್ಲಿ ಶೋಭಯಾತ್ರೆ – ಇಂದಿನಿಂದ 7 ದಿನ ಶ್ರೀ ಕಾಲರುದ್ರ ಮಹಾಯಜ್ಞ

[ad_1]

Kolara 3

ಕೋಲಾರ: ಇಂದಿನ 7 ದಿನಗಳ ಕಾಲ ಕೋಲಾರದ ಮುಳಬಾಗಿಲು ತಾಲ್ಲೂಕಿನ ವಿರೂಪಾಕ್ಷ ದೇವಾಲಯದಲ್ಲಿ ಕಾಲ ಶ್ರೀ ರುದ್ರ ಮಹಾಯಜ್ಞ ಅಂಗವಾಗಿ ಶೋಭಾಯಾತ್ರೆ (Shobha Yatra) ನಡೆಯಲಿದೆ.

ಲೋಕ ಕಲ್ಯಾಣಾರ್ಥವಾಗಿ ನಾಗ ಸಾಧುಗಳಿಂಧ (Naga Sadhu) ಶೋಭಾಯಾತ್ರೆ ನಡೆಯುತ್ತಿದ್ದು, ಇದರ ಅಂಗವಾಗಿ ಪ್ರಸಿದ್ಧ ವಿರೂಪಾಕ್ಷಿ ದೇವಾಲಯದಲ್ಲಿ ಕಾಲ ರುದ್ರ ಮಹಾಯಜ್ಞ ನೆರವೇರಲಿದೆ. ಹಿಂದೂ ಸನಾತನ ಸಮಿತಿ ಹಾಗೂ ಸ್ಥಳೀಯರಿಂದ ಮಹಾಯಾಗ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: Maha Shivaratri| ನಾಗ ಸಾಧುಗಳು ಶಿವನನ್ನು ಪೂಜಿಸೋದು ಯಾಕೆ?

Kolara

ಅದರಂತೆ ಇಂದು ಮುತ್ಯಾಲಪೇಟೆ ಗಂಗಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಶೋಭಾಯಾತ್ರೆ ಆರಂಭಿಸಲಾಯಿತು. ಹತ್ತಾರು ನಾಗಸಾಧುಗಳು ಶೋಭಾಯಾತ್ರೆಯಲ್ಲಿ ಭಾಗವಿಸಿದ್ರು. ಮಹಿಳೆಯರು ಕಳಸಗಳೊಂದಿಗೆ ಸ್ವಾಗತ ಕೋರಿ ಆಶೀರ್ವಾದ ಪಡೆದರು. ಇದನ್ನೂ ಓದಿ: ವಾರದಲ್ಲಿ ಆಟೋ LPG ದರ 30 ರಿಂದ 40 ರೂ. ಏರಿಕೆ – ಕಲಬುರಗಿಯಲ್ಲಿ ಚಾಲಕರ ಆಕ್ರೋಶ

Kolara 2

ನಾಗ ಸಾಧುಗಳು ಎಂದರೆ ಯಾರು?
ನಾಗ ಸಾಧುಗಳ ಲೋಕವೇ ಚಿತ್ರ ವಿಚಿತ್ರ. ಅವರು ನಮಗೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರನ್ನು ನಾವು ಧಾರ್ಮಿಕ ಯಾತ್ರೆಗಳಾದ ಮಾಹಾಕುಂಭಮೇಳ, ಕುಂಭಮೇಳದಂತಹ ಸಮಯದಲ್ಲಿ ಮಾತ್ರ ಕಾಣಬಹುದು. ಅವರಲ್ಲೂ ಅಪಾರ ದೈವಿಕ ಶಕ್ತಿಯಿರುತ್ತದೆ ಎಂಬುದು ನಂಬಿಕೆ. ಅವರ ಕಟ್ಟುನಿಟ್ಟಿನ ದೈನಂದಿನ ನಿಯಮಗಳು ಮತ್ತು ಕಠಿಣವಾದ ಜೀವನ ಶೈಲಿ ಎಂತಹ ವ್ಯಕ್ತಿಯನ್ನಾದರೂ ಒಮ್ಮೆ ದಂಗಾಗಿಸುತ್ತದೆ. ದೂರದಿಂದ ಅಥವಾ ಹೊರಗಡೆಯಿಂದ ನೋಡುವಾಗ ಅವರು ಅಸ್ಠವ್ಯಸ್ಥವಾದ ಕೂದಲನ್ನು ಹೊಂದಿರುವಂತೆ, ಶಿಸ್ತನ್ನು ಮರೆತಂತೆ ಕಂಡರೂ ಅವರು ಮಾಡುವ ಪ್ರತಿಯೊಂದು ಕೆಲಸವೂ ವ್ಯವಸ್ಥಿತವಾಗಿ ಮಾಡುತ್ತಾರೆ. ಅವರು ನಾಗ ಸಾಧುಗಳು ಎನಿಸಿಕೊಳ್ಳಬೇಕಾದರೆ ಕಠಿಣವಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಾಗಾ ಸಾಧುಗಳಿಗೆ ದೀಕ್ಷೆ ನೀಡಿದ ನಂತರ ಅವರನ್ನು ವಿಶೇಷ ವರ್ಗದಲ್ಲಿ ಇರಿಸಲಾಗುತ್ತದೆ.

[ad_2]

Source link publictv.in

Leave a Reply

Your email address will not be published. Required fields are marked *