Advertisement

ಚುನಾವಣಾ ಪ್ರಚಾರದ ವೇಳೆ ಕೈ ಕೈ ಮಿಲಾಯಿಸಿಸಿದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು

[ad_1]

Clashes between Congress and BJP workers at Bagalkote election campaign rally

ಬಾಗಲಕೋಟೆ: ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಎದುರು ಬದರಾದ ಕಾಂಗ್ರೆಸ್‌ (Congress) ಹಾಗೂ ಬಿಜೆಪಿ (BJP) ಕಾರ್ಯಕರ್ತರು ಕೈ ಕೈ ಮಿಲಾಯಿಸಿದ ಘಟನೆ ಬಾಗಲಕೋಟೆಯ (Bagalkote) ಬೇವೂರು ಗ್ರಾಮದಲ್ಲಿ ನಡೆದಿದೆ.

ಕಾಂಗ್ರೆಸ್ ಪರ ಸಚಿವ ಆರ್.ಬಿ.ತಿಮ್ಮಾಪೂರ್ ಹಾಗೂ ಬಿಜೆಪಿ ಪರ ಬಿ.ಶ್ರೀರಾಮುಲು ಪ್ರಚಾರ ನಡೆಸುತ್ತಿದ್ದರು. ಆಗ ಎರಡೂ ಪಕ್ಷದ ಕಾರ್ಯಕರ್ತರು ಗ್ರಾಮದಲ್ಲಿ ಎದುರಾಗಿದ್ದಾರೆ. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಗೋ ಬ್ಯಾಕ್ ರಾಮುಲು ಎಂದು ಕೂಗಿದ್ದಾರೆ. ಇದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು, ನೂಕಾಟ ತಳ್ಳಾಟ ನಡೆದಿದೆ. ಅಲ್ಲದೇ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ. ಇದನ್ನೂ ಓದಿ: ಎಲ್‍ಪಿಜಿ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ

ಚುನಾವಣಾ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ಕ್ಷೇತ್ರದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಬೀಡು ಬಿಟ್ಟಿದ್ದಾರೆ. ಇದನ್ನೂ ಓದಿ: ನೆಲಮಂಗಲ ಬಳಿ ಸರಣಿ ಅಪಘಾತ – ರೊಚ್ಚಿಗೆದ್ದ ಸವಾರರಿಂದ KSRTC ಚಾಲಕನಿಗೆ ಥಳಿತ

[ad_2]

Source link publictv.in

Leave a Reply

Your email address will not be published. Required fields are marked *