Advertisement

ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಹಾಕದ್ದಕ್ಕೆ ಆಕ್ರೋಶ – ಚಿಕ್ಕಬಳ್ಳಾಪುರದಲ್ಲಿ ಬಂಕ್ ಕ್ಲೋಸ್ ಮಾಡಿಸಿದ ರೈತರು

[ad_1]

Chikkaballapura Petrol Bunk Close

ಚಿಕ್ಕಬಳ್ಳಾಪುರ: ಪ್ಲಾಸ್ಟಿಕ್ ಬಾಟಲಿ, ಕ್ಯಾನ್‌ಗಳಿಗೆ ಪೆಟ್ರೋಲ್ – ಡೀಸೆಲ್ ಹಾಕದ ಹಿನ್ನೆಲೆ ಪೆಟ್ರೋಲ್ ಬಂಕ್ (Petrol Bunk) ಬಂದ್ ಮಾಡಿಸಿ ರೈತರು (Farmers) ಆಕ್ರೋಶ ಹೊರಹಾಕಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಡಳಿತ ಭವನದ ಭಾರತ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.

ಪ್ಲಾಸ್ಟಿಕ್ ಬಾಟಲಿ, ಕ್ಯಾನ್‌ಗಳಿಗೆ ಪೆಟ್ರೋಲ್ ಡೀಸೆಲ್ ಹಾಕದಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಬಂಕ್ ಮಾಲೀಕರಿಗೆ ಖಡನ್ ಸೂಚನೆ ಕೊಟ್ಟಿದೆ. ಹೀಗಾಗಿ ಬಂಕ್‌ನವರು ಪ್ಲಾಸ್ಟಿಕ್ ಬಾಟಲಿ, ಕ್ಯಾನ್‌ಗಳಿಗೆ ಪೆಟ್ರೋಲ್ ಡಿಸೇಲ್ ಹಾಕುತ್ತಿಲ್ಲ. ಇದರಿಂದ ರೋಸಿ ಹೋದ ರೈತರು, ಬೆಳೆಗಳಿಗೆ ಮದ್ದು ಹೊಡೆಯುವ ಮಿನಿ ಟ್ರಾಕ್ಟರ್‌ನಿಂದ ಮದ್ದು ಹೊಡೆಯಲು ಪೆಟ್ರೋಲ್ ಡೀಸೆಲ್ ಬೇಕೇ ಬೇಕು. ಇಷ್ಟು ದಿನ ಪ್ಲಾಸ್ಟಿಕ್ ಬಾಟಲಿಗಳಿಗೆ ಪೆಟ್ರೋಲ್-ಡೀಸೆಲ್ ಹಾಕುತ್ತಿದ್ದ ಬಂಕ್‌ನವರು ಈಗ ಹಾಕಲ್ಲ ಅಂತಿದ್ದಾರೆ. ನಮಗೆ ಪೆಟ್ರೋಲ್ ಡೀಸೆಲ್ ಬೇಕು ಅಂತ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಕುವೈತ್‌ ಮೇಲೆ ಇರಾನ್‌ ದಾಳಿ – ವಿದ್ಯುತ್‌ ಸ್ಥಾವರದಲ್ಲಿದ್ದ ಭಾರತೀಯ ಕಾರ್ಮಿಕ ಸಾವು

ರೈತರಿಗೆ ಹಾಕಲ್ಲ ಅಂದರೆ ಯಾರಿಗೂ ಪೆಟ್ರೋಲ್ ಡೀಸೆಲ್ ಹಾಕಬೇಡಿ ಎಂದು ಗಲಾಟೆ ಮಾಡಿ ಪೆಟ್ರೋಲ್ ಬಂಕ್ ಬಂದ್ ಮಾಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ – ಮಹಿಳೆಯನ್ನ ಕೊಂದು ಅರ್ಧ ದೇಹವನ್ನ ಫ್ರಿಡ್ಜ್‌ನಲ್ಲಿಟ್ಟಿದ್ದ ನೌಕಾಪಡೆ ಉದ್ಯೋಗಿ


[ad_2]

Source link publictv.in

Leave a Reply

Your email address will not be published. Required fields are marked *