Advertisement

Tamil Nadu Polls | ಸಿಎಂ ಸ್ಟಾಲಿನ್, ನಟ ವಿಜಯ್ ನಾಮಪತ್ರ ಸಲ್ಲಿಕೆ – ಶಕ್ತಿ ಪ್ರದರ್ಶನ

[ad_1]

MK Stalin Vijay

– ಡಿಎಂಕೆ ಭಾರೀ ಗೆಲುವು ಸಾಧಿಸಲಿದೆ ಎಂದ ಸ್ಟಾಲಿನ್
– ರಾಜ್ಯದಲ್ಲಿರೋದು ಜನವಿರೋಧಿ ಸರ್ಕಾರ; ನಟ ವಿಜಯ್

ಚೆನ್ನೈ: ಏಪ್ರಿಲ್‌ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ (Tamil Nadu Assembly Polls) ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಮತ್ತು ಪ್ರತಿಸ್ಪರ್ಧಿ ಟಿವಿಕೆ ಪಕ್ಷದ ಮುಖ್ಯಸ್ಥರಾದ ವಿಜಯ್‌ (Actor Vijay) ಅವರಿಂದು ನಾಮಪತ್ರ ಸಲ್ಲಿಸಿದ್ದಾರೆ.

ಹಾಲಿ ಸರ್ಕಾರದ ಅವಧಿ ಮೇ 10 ರಂದು ಮುಕ್ತಾಯಗೊಳ್ಳಲಿದೆ. ಹಾಗಾಗಿ ಏಪ್ರಿಲ್‌ 23 ರಂದು ಒಂದೇ ಹಂತದಲ್ಲಿ 234 ಕ್ಷೇತ್ರಗಳಿಗೆ ಮತದಾನ (Voting) ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

MK Stalin (1)

ಸಿಎಂ ಎಂ.ಕೆ ಸ್ಟಾಲಿನ್‌ (MK Stalin) ಅವರು 2011, 2016 ಮತ್ತು 2021 ರಲ್ಲಿ ಗೆದ್ದ ಕೊಲತ್ತೂರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಚೊಚ್ಚಲ ಚುನಾವಣೆ ಎದುರಿಸುತ್ತಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ವಿಜಯ್ ಚೆನ್ನೈನ ನಗರ ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚಿ ಪೂರ್ವ (Tiruchi East) ಕ್ಷೇತ್ರಗಳಿಂದ ಸ್ಪರ್ಧೆಗಿಳಿದಿದ್ದಾರೆ.

ಸ್ಟಾಲಿನ್‌ ಅದ್ಧೂರಿ ರೋಡ್‌ ಶೋ
ನಾಮಪತ್ರ ಸಲ್ಲಿಸಿದ ಬಳಿಕ ಅದ್ಧೂರಿ ರೋಡ್‌ ಶೋ ನಡೆಸಿದ ಎಂ.ಕೆ ಸ್ಟಾಲಿನ್‌ ಅವರು, ಮತ್ತೊಮ್ಮೆ ತಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಜನರ ಬೆಂಬಲ ಕೋರಿದರು. ಇದೇ ವೇಳೆ ತಮ್ಮ ಅವಧಿಯಲ್ಲಿ ಕೊಲತ್ತೂರ್‌ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಕುರಿತ ಡಿಎಂಕೆ ಸಾಧನೆಗಳ ಪುಸ್ತಕವನ್ನು ಅನಾವರಣಗೊಳಿಸಿದರು.

ಬಳಿಕ ಮಾತನಾಡಿ, ಕಳೆದ ಮೂರು ಚುನಾವಣೆಗಳಿಗಿಂತಲೂ ಈ ಬಾರಿ ನನಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಇದು ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್, ತಮಿಳುನಾಡು ದೆಹಲಿ ವಿರುದ್ಧ ಹೋರಾಡುತ್ತಿದೆ. ಹಾಗಾಗಿ ಈ ಬಾರಿಯ ಗೆಲುವು ತುಂಬಾ ದೊಡ್ಡದಾಗಿರುತ್ತೆ ಎಂದು ಅಬ್ಬರಿಸಿದರು.

TVK Vijay

164 ಕ್ಷೇತ್ರಗಳಲ್ಲಿ ಡಿಎಂಕೆ ಸ್ಪರ್ಧೆ
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಪೈಕಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಮೈತ್ರಿಕೂಟದ ಡಿಎಂಕೆ 164 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಇನ್ನುಳಿದ 70 ಸ್ಥಾನಗಳನ್ನು ಮೈತ್ರಿಕೂಟದ ಇತರ ಪಕ್ಷಗಳು ಹಂಚಿಕೊಂಡಿವೆ. ಕಾಂಗ್ರೆಸ್‌ 28, ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (ಸಿಪಿಐ) 5, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) (ಸಿಪಿಐ(ಎಂ) 5, ವಿಸಿಕೆ 8 ಮತ್ತು ಎಂಡಿಎಂಕೆ 4 ಸ್ಥಾನಗಳಲ್ಲಿ ಸ್ಪರ್ಧಿಸಿದ್ರೆ, ಸಣ್ಣ ಪಕ್ಷಗಳಾದ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) 10, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 2 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿವೆ.

ಟಿವಿಕೆಗೆ ಚೊಚ್ಚಲ ಚುನಾವಣೆ
ಇನ್ನೂ ಚೊಚ್ಚಲ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಟಿವಿಕೆ ಪಕ್ಷದ ಮುಖ್ಯಸ್ಥ ನಟ ವಿಜಯ್‌ ಚೆನ್ನೈನ ಪೆರಂಬೂರು ಮತ್ತು ತಿರುಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇಂದು ವ್ಯಾಸರ್ಪಾಡಿಯ ಡಾ. ಅಂಬೇಡ್ಕರ್ ಸರ್ಕಾರಿ ಕಲಾ ಕಾಲೇಜಿನಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಸಿಟಿಆರ್ ನಿರ್ಮಲ್ ಕುಮಾರ್ ಹಾಗೂ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು.

DMK 1

ಭರ್ಜರಿ ರೋಡ್‌ ಶೋ
ನಾಮಪತ್ರ ಸಲ್ಲಿಕೆ ಬಳಿಕ ನಟ-ರಾಜಕಾರಣಿ ವಿಜಯ್‌ ದಳಪತಿ, ಪ್ರಮುಖ ಬೀದಿಗಳಲ್ಲಿ ರೋಡ್‌ ಶೋ ನಡೆಸಿ ಶಕ್ತಿ ಪ್ರದರ್ಶಿಸಿದರು. ಇದೇ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ವಿಜಯ್‌, ಈ ಚುನಾವಣೆ ಡಿಎಂಕೆ-ಟಿವಿಕೆ ನಡುವಿನ ನೇರ ಸ್ಪರ್ಧೆ ಎಂದು ಪುನರುಚ್ಚರಿಸಿದರು

ರಾಜ್ಯದಲ್ಲಿ ಈಗ ಜನವಿರೋಧಿ ಸರ್ಕಾರ ಇದೆ. ಆದ್ರೆ ನಾನು ಜನರೊಂದಿಗೆ ನಿಲ್ಲುವ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದೇನೆ. ಅವರು ಕೇವಲ ಅಭ್ಯರ್ಥಿಗಳಲ್ಲ ಜನಸೇವಕರು, ಜನರ ರಕ್ಷಕರು. ಮತದಾರರು ಅವರಿಗೆ ತುಂಬು ಹೃದಯದಿಂದ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.

[ad_2]

Source link publictv.in

Leave a Reply

Your email address will not be published. Required fields are marked *