Advertisement

ಮುಸ್ಲಿಂ ಯುವಕನ ಮದುವೆ ಸಂಭ್ರಮದಲ್ಲಿ ದೈವಕ್ಕೆ ಅವಮಾನ? ವರನ ವೇಷ ವಿವಾದ

[ad_1]

ಮಡಿಕೇರಿ ಮಾ.30: ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಮುಸ್ಲಿಂ ಯುವಕನೊಬ್ಬನ ವಿವಾಹದ ಹಿಂದಿನ ದಿನ ಮದುಮಗನಿಗೆ ಎಲೆಗಳನ್ನು ಸುತ್ತಿ, ಮುಖಕ್ಕೆ ಬಣ್ಣ ಬಳಿದು ಹಾಡುತ್ತಾ ಎಂಜಾಯ್‌ ಮಾಡಿರುವುದು ಹೊಸ ವಿವಾದವನ್ನು ಹುಟ್ಟು ಹಾಕಿದೆ. ಇದು ದೈವ ನರ್ತನವನ್ನು ಹೋಲುತ್ತಿದೆ ಎಂದು ಆರೋಪಿಸಲಾಗಿದೆ.

ಮೈ ತುಂಬಾ ಸೊಪ್ಪು, ಬಾಳೆಗೊನೆ, ಮುಖದ ತುಂಬ ಬಣ್ಣ ಮತ್ತು ಕೈಯಲ್ಲಿ ದೊಣ್ಣೆ ಹಿಡಿದಿರೋ ಯುವಕನ ವಿಡಿಯೋ ವೈರಲ್‌ ಬೆನ್ನಲ್ಲೇ ಆಕ್ರೋಶ ವ್ಯಕ್ತವಾಗಿದೆ.

ಕೊಡಗು ಜಿಲ್ಲೆಯಲ್ಲಿ ಈ ಘಟನೆ ಭಾರೀ ವಿವಾದ ಹುಟ್ಟಿಸಿದ್ದು, ಯುವಕರ ಈ ವರ್ತನೆ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ದೈವನರ್ತನವನ್ನು ಅವಮಾನ ಮಾಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ. ಕೊಡಗು ಜಿಲ್ಲಾ ದೈವ ನರ್ತಕರ ಮತ್ತು ದೈವ ಆರಾಧಕರ ಸಂಘ ಈ ಕುರಿತು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರನ್ನು ನೀಡಿದೆ.

ದೂರಲ್ಲಿ ಏನಿದೆ?
ನಾಪೊಕ್ಲು ಎಮ್ಮೆಮಾಡುವಿನಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ದೈವವನ್ನೇ ಹೋಲುವ ರೀತಿಯಲ್ಲಿ ಮದುಮಗನು ವೇಷ ಹಾಕಿ ಅತಿರೇಕದ ವರ್ತನೆ ತೋರಿರುವುದವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ದೈವಕೊಲದ ಮಾದರಿ ಮುಖಕ್ಕೆ ಬಣ್ಣ ಬಳಿದು ದೈವವನ್ನೇ ಅಣಕಿಸುವ ರೀತಿಯಲ್ಲಿ ವಿಕೃತವಾಗಿ ವರ್ತಿಸಲಾಗಿದ್ದು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದನ್ನು ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ತೀವ್ರವಾಗಿ ಖಂಡಿಸುತ್ತದೆ. ದೈವ ಆರಾಧನೆ ನಮ್ಮ ಹಿರಿಯರು ಹಾಕಿಕೊಟ್ಟಿರುವ ಮೂಲನಂಬಿಕೆ, ಮೂಲ ಪದ್ಧತಿ, ಆಧಾರವಾಗಿದ್ದು ದೈವ ಆರಾಧನೆ ಪ್ರದರ್ಶನದ ಹಾಗೂ ಜಾನಪದ ಕಲೆಯು ಅಲ್ಲ. ಈ ರೀತಿಯಲ್ಲಿ ದೈವವನ್ನೇ ಹೊಲುವ ರೀತಿ ವೇಷಭೂಷಣ ಹಾಕಿರುವುದು ದೈವಕ್ಕೆ ಮಾಡುದ ಅಪಮಾನ, ಅಪಹಾಸ್ಯ ಮಾತ್ರವಲ್ಲ. ದೈವಾರಾಧನೆ ಮಾಡುವ ಸಮುದಾಯಕ್ಕೆ ಮಾಡಿರುವ ನಿಂದನೆಯೂ ಹೌದು ಎಂದು ದೂರಲಾಗಿದೆ.

banner



[ad_2]

Source link

Leave a Reply

Your email address will not be published. Required fields are marked *