Advertisement

ಎಪ್ರಿಲ್‌ 1 ರಿಂದ ಈ ಎಲ್ಲಾ ಸಿಸಿಟಿವಿ ಕಂಪನಿ ಬ್ಯಾನ್‌

[ad_1]

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಭಾರತ ಸರಕಾರವು ಚೀನಾದ ಸಿಸಿಟಿವಿ ಕ್ಯಾಮೆರಾ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಎಪ್ರಿಲ್‌ 1 ರಿಂದ ಚೀನಾ ಮೂಲದ ಪ್ರಮುಖ ವಿಡಿಯೋ ಕಣ್ಗಾವಲು ಕಂಪನಿಗಳಾದ ಹಿಕ್‌ ವಿಷನ್‌, ದಹುವಾ ಮತ್ತು ಟಿಪಿ-ಲಿಂಕ್‌ ನಂತರ ಇಂಟರ್ನೆಟ್‌ ಆಧಾರಿತ ಸಿಸಿಟಿವಿ ಕ್ಯಾಮೆರಾಗಳ ಮಾರಾಟವನ್ನು ನಿಷೇಧ ಮಾಡಲು ಸಿದ್ಧತೆ ನಡೆಸಲಾಗಿದೆ.

ಸ್ಟ್ಯಾಂಡರ್ಡೈಸೇಶನ್‌ ಟೆಸ್ಟಿಂಗ್‌ ಆಂಡ್‌ ಕ್ವಾಲಿಟಿ ಸರ್ಟಿಫಿಕೇಶನ್‌ ಅಡಿಯಲ್ಲಿ ಹೊಸ ಪ್ರಮಾಣೀಕರಣ ನಿಯಮಗಳು ಜಾರಿಗೆ ಬರಲಿದೆ. ಇದರ ಅನ್ವಯ, ಯಾವುದೇ ಸಿಸಿಟಿವಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುವ ಮೊದಲು ಸರಕಾರದ ಕಡ್ಡಾಯ ಅನುಮೋದನೆ ಇರಲೇಬೇಕು.

ಇನ್ನು ಮುಂದೆ ಎಸ್‌ಟಿಕ್ಯುಸಿ ಅನುಮೋದನೆ ಇಲ್ಲದೆ, ಈ ಚೀನಾ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಲು ಸಾಧ್ಯವಿಲ್ಲ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಕೆಲವು ನಿಯಮಗಳನ್ನು ರೂಪಿಸಿದ್ದು, ತಯಾರಕರು ತಮ್ಮ ಸಿಸಿಟಿವಿಯಲ್ಲಿ ಬಳಸುವ ಚಿಪ್‌ಸೆಟ್ (SoC) ಯಾವ ದೇಶದ್ದು ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು. ಅಲ್ಲದೆ, ಸಿಸಿಟಿವಿ ಕ್ಯಾಮೆರಾಗಳನ್ನು ರಿಮೋಟ್ ಮೂಲಕ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂಬ ಬಗ್ಗೆ ಕಠಿಣ ಪರೀಕ್ಷೆ ನಡೆಸಲಾಗುತ್ತದೆ. ಡೇಟಾ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದಿದೆ. ಈ ನಿಯಮಗಳನ್ನು ಪಾಲಿಸಲು ಕಂಪನಿಗಳಿಗೆ ಎರಡು ವರ್ಷಗಳ ಕಾಲಾವಕಾಶ ನೀಡಲಾಗಿತ್ತು. ಈಗಾಗಲೇ 500ಕ್ಕೂ ಹೆಚ್ಚು ಹೊಸ ಮಾದರಿಯ ಸಿಸಿಟಿವಿಗಳು ಈ ಪರೀಕ್ಷೆಯಲ್ಲಿ ಪಾಸ್ ಆಗಿ ಪ್ರಮಾಣೀಕರಣ ಪಡೆದುಕೊಂಡಿವೆ.

banner

 



[ad_2]

Source link

Leave a Reply

Your email address will not be published. Required fields are marked *