ಹುಬ್ಬಳ್ಳಿ: ಆರು ಲಕ್ಷ ಲಂಚ ಪಡೆಯುತ್ತಿರುವಾಗಲೇ ಹುಬ್ಬಳ್ಳಿ ಕರ್ಮರ್ಷಿಯಲ್ ಟ್ಯಾಕ್ಸ್ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿದಿರುವ ಪ್ರಕರಣ ನಡೆದಿದೆ. ಕರ್ಮಷಿಯಲ್ ಟ್ಯಾಕ್ಸ್ ಡೆಪ್ಯುಟಿ ಕಮೀಷನರ್ ಭರತ್ ಹೆಗ್ಗಡೆ ಲೋಕಾಯುಕ್ತ ಟ್ರಾಪ್ ಗೆ ಒಳಗಾಗಿದ್ದಾರೆ.
ಅಂಕೋಲಾ ಮೂಲದ ಉದ್ಯಮಿ ವಿಶ್ವಜಿತ್ ನಾಯಕ್ ಎಂಬುವವರಿಂದ ಆರು ಲಕ್ಷ ಲಂಚ ಪಡೆಯುವಾಗಲೇ ಲೋಕಾ ಬಲೆಗೆ ಬಿದ್ದಿದ್ದಾರೆ. 2019 ರಲ್ಲಿ 8 ಹೆವಿ ಟಿಪ್ಪರ್ ವಾಹನಗಳನ್ನು ವಿಶ್ವಜೀತ್ ನಾಯಕ್ ಖರೀದಿ ಮಾಡಿದ್ದರು. ಇದಕ್ಕೆ 60 ಲಕ್ಷ ಇನ್ಪುಟ್ ಟ್ಯಾಕ್ಸ್ ಕಟ್ ಆಗಿತ್ತು. ಇದರಲ್ಲಿ 34 ಲಕ್ಷ ಇನ್ಪುಟ್ ಟ್ಯಾಕ್ಸ್ ಮರು ಕ್ರೆಡಿಟ್ ಪಡೆದುಕೊಂಡಿದ್ದರು.ಈ ಇನ್ಪುಟ್ ಟ್ಯಾಕ್ಸ್ ಕಾನೂನು ಬಾಹಿರ, ಸುಳ್ಳು ದಾಖಲೆ ನೀಡಿ ಟ್ಯಾಕ್ಸ್ ಮರುಪಾವತಿ ಮಾಡಿಕೊಂಡಿದ್ದಾರೆ ಅಂತ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದರು. ಈ ಬಗ್ಗ ವಿಶ್ವಜಿತ್ ನಾಯಕ್ ತೀವ್ರ ವಿಚಾರಣೆ ನಡೆಸಲಾಗುತ್ತಿತ್ತು.
ಇಲ್ಲಿಯ ವರಿಗೆ ವಿಶ್ವಜಿತ್ ನಾಯಕ್ ರನ್ನು,ನಾಲ್ಕು ಬಾರಿ ವಿಚಾರಣೆ ಕರೆದಿದ್ದ ಡಿಸಿ ಭರತ್ ,ಇಂದು ಐದನೇ ಬಾರಿಗೆ ವಿಚಾರಣೆಗೆ ಕರೆದಿದ್ದು,ವಿಚಾರಣೆಗೆ ಬರುವಾಗ ಆರು ಲಕ್ಷ ಹಣ ತೆಗೆದುಕೊಂಡ ಬನ್ನಿ, ನಿಮ್ಮ ಕೇಸ್ ಕ್ಲೋಸ್ ಮಾಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಈ ಮಾನಸಿಕವಾಗಿ ನೊಂದ ವಿಶ್ವ್ ಜಿತ್ ಬೆಂಗಳೂರು ಲೋಕಾಯುಕ್ತಗೆ ದೂರು ನೀಡಿದ್ದರು. ಮೊದಲೇ ಪ್ಲಾನ್ ಮಾಡಿದಂತೆ ಇಂದು ವಿಚಾರಣೆಗೆ ಬಂದ ವಿಶ್ವಜಿತ್ 6 ಲಕ್ಷ ಭರತ್ ನೀಡುವಾಗಲೇ
ಬೆಂಗಳೂರು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್, ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ, ಪ್ರದೀಪ್ ಕುಮಾರ್, ಇನ್ಸ್ಪೆಕ್ಟರ್ ರಾಜು ನೇತೃತ್ವದ ತಂಡದಿಂದ ದಾಳಿ ಮಾಡಿ ರೈಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ..


















Leave a Reply