[ad_1]

ಗುವಾಹಟಿ: ಆರಂಭದಲ್ಲಿ ಬೌಲರ್‌ಗಳ ಅಬ್ಬರ ನಂತರ ವೈಭವ್ ಸೂರ್ಯವಂಶಿ(Vaibhav Sooryavanshi) ಅವರ ಸ್ಫೋಟಕ ಅರ್ಧಶತಕದ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಜಸ್ಥಾನ ರಾಯಲ್ಸ್(Rajasthan Royals) 8 ವಿಕೆಟ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಚೆನ್ನೈ 19.4 ಓವರ್‌ಗಳಲ್ಲಿ 127 ರನ್ ಗಳಿಸಿ ಆಲೌಟ್ ಆಯ್ತು. ಸುಲಭ ಸವಾಲನ್ನು ಬೆನ್ನಟ್ಟಿದ ಆರ್‌ಆರ್ 12.1 ಓವರ್‌ಗಳಲ್ಲಿ2 ವಿಕೆಟ್ ನಷ್ಟಕ್ಕೆ 128 ರನ್ ಹೊಡೆದು ಗೆಲುವು ಸಾಧಿಸಿತು.
ಸೂರ್ಯವಂಶಿ ತಾನು ಎದುರಿಸಿದ ಮೊದಲ ಎಸೆತದಲ್ಲಿ ಬೌಂಡರಿ, ಎರಡನೇ ಎಸೆತದಲ್ಲಿ ಸಿಕ್ಸ್ ಸಿಡಿಸಿ ಅಬ್ಬರ ಆಟಕ್ಕೆ ಚಾಲನೆ ನೀಡಿದರು. ಸೂರ್ಯವಂಶಿ 15 ಎಸೆತಕ್ಕೆ ಅರ್ಧಶತಕ ಸಿಡಿಸಿ ಅಂತಿಮವಾಗಿ 52 ರನ್(17 ಎಸೆತ, 4 ಬೌಂಡರಿ, 5 ಸಿಕ್ಸ್) ಸಿಡಿಸಿ ಕ್ಯಾಚ್ ನೀಡಿ ಔಟಾದರು. ಕೇವಲ 15 ಎಸೆತಗಳಲ್ಲಿ ಐಪಿಎಲ್ ಇತಿಹಾಸದಲ್ಲಿ ಮೂರನೇ ವೇಗದ ಅರ್ಧಶತಕ ಬಾರಿಸಿದ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರವಾಗಿದ್ದಾರೆ. ಇದನ್ನೂ ಓದಿ: ಬೌಂಡರಿ, ಸಿಕ್ಸರ್‌ನಲ್ಲಿ 150 ರನ್ – ಸೂರ್ಯವಂಶಿಯ ಸ್ಫೋಟಕ ಆಟಕ್ಕೆ ವಿಶ್ವದಾಖಲೆ ಪುಡಿ ಪುಡಿ
Flair on display
Vaibhav Sooryavanshi in the house
Updates
https://t.co/UzbuFk5G26#TATAIPL | #KhelBindaas | #RRvCSK pic.twitter.com/dr0hYVaVij
— IndianPremierLeague (@IPL) March 30, 2026
ಆರಂಭದಲ್ಲೇ ಕುಸಿತ:
ಚೆನ್ನೈಗೆ ಆರಂಭದಲ್ಲೇ ಆರ್‌ಆರ್ ಬೌಲರ್‌ಗಳು ಶಾಕ್ ನೀಡಿದರು. ನಾಂಡ್ರೆ ಬರ್ಗರ್ ಸಂಜು ಸಾಮ್ಸನ್ ಅವರನ್ನು ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಜೋಫ್ರಾ ಆರ್ಚರ್ ಬೌಲ್ಡ್ ಮಾಡಿದರು. ನಂತರ ಸಂದೀಪ್ ಶರ್ಮಾ, ನಾಯಕ ರವೀಂದ್ರ ಜಡೇಜಾ ನಾವು ಕಡಿಮೆ ಇಲ್ಲ ಎನ್ನುವಂತೆ ಬೌಲಿಂಗ್ ಮಾಡಿದರು.
𝐒𝐨𝐮𝐧𝐝𝐬 𝐨𝐟 𝐓𝐢𝐦𝐛𝐞𝐫
Nandre Burger
Jofra Archer #RR fans, how was that for a start?
Updates
https://t.co/UzbuFk5G26#TATAIPL | #KhelBindaas | #RRvCSK | @rajasthanroyals pic.twitter.com/iqLU8yIgcX
— IndianPremierLeague (@IPL) March 30, 2026
ಒಂದು ಹಂತದಲ್ಲಿ 94 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದಾಗ ಚೆನ್ನೈ 100 ರನ್ ದಾಟುವುದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಜೇಮೀ ಓವರ್ಟನ್ ಅವರು 43 ರನ್(36 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 127 ರನ್‌ವರೆಗೆ ತೆಗೆದುಕೊಂಡು ಹೋದರು. ಇದನ್ನೂ ಓದಿ: ವೈಭವ್ ʻಯಶಸ್ವಿʼ ಶತಕ – 14ರ ಬಾಲಕನ ಆಟಕ್ಕೆ ಗುಜರಾತ್ ಧೂಳಿಪಟ
ಜೋಫ್ರಾ ಅರ್ಚರ್, ನಾಂಡ್ರೆ ಬರ್ಗರ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ ಬ್ರಿಜೇಶ್ ಶರ್ಮಾ, ಸಂದೀಪ್ ಶರ್ಮಾ, ರವಿ ಬಿಷ್ನೋಯ್ ತಲಾ ಒಂದೊಂದು ವಿಕೆಟ್ ಪಡೆದರು.
[ad_2]
Source link publictv.in






Jofra Archer 














Leave a Reply