Advertisement

ಕೈದಿ ಭೇಟಿಗಾಗಿ ಖಾಸಗಿ ಅಂಗದೊಳಗೆ ತಂಬಾಕು, ಸಿಮ್ ಕಾರ್ಡ್ ಇಟ್ಟುಕೊಂಡು ಬಂದ 27ರ ಯುವತಿ !!

[ad_1]

Parappana Agrahara : ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಯುವತಿಯೊಬ್ಬಳು ತನ್ನ ಖಾಸಗಿ ಅಂಗದಲ್ಲಿ ತಂಬಾಕು ಹಾಗೂ ಸಿಮ್‌ಕಾರ್ಡ್‌ಗಳನ್ನು ಅಡಗಿಸಿಟ್ಟುಕೊಂಡು ಬಂದಿದ್ದು, ಇದೀಗ ಆಕೆಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಾ.26 ರಂದು ಸಂಜೆ 4 ಗಂಟೆ ಸುಮಾರಿನಲ್ಲಿ ಅಸ್ಸಾಂ ಮೂಲದ ರಿತಿಕಾ ರೈ ಎಂಬ ಯುವತಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಯನ್ನು ಭೇಟಿ ಮಾಡಲು ತನ್ನ ಖಾಸಗಿ ಅಂಗದಲ್ಲಿ ತಂಬಾಕು ಹಾಗೂ ಸಿಮ್‌ಕಾರ್ಡ್‌ಗಳನ್ನು ಅಡಗಿಸಿಟ್ಟುಕೊಂಡು ಬಂದಿದ್ದಳು. ಈ ಯುವತಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾರಾಗೃಹದೊಳಗೆ ಹೋಗಲು ಪಾಸ್‌‍ ಪಡೆದು ಸಾಮಾನ್ಯ ತಪಾಸಣೆ ವೇಳೆ ಮಹಿಳಾ ಸಿಬ್ಬಂದಿಗೆ ಈ ಯುವತಿ ಮೇಲೆ ಅನುಮಾನ ಬಂದಿದೆ. ತಕ್ಷಣ ಪರಿಶೀಲನೆ ನಡೆಸಿದಾಗ ಆ ಯುವತಿ ಖಾಸಗಿ ಅಂಗದಲ್ಲಿ ತಂಬಾಕು ಪದಾರ್ಥಗಳ ಮೂರು ಪ್ಯಾಕೆಟ್‌ಗಳು ಹಾಗೂ 5ಜಿ ಮೊಬೈಲ್‌ ಸಿಮ್‌ಕಾರ್ಡ್‌ಗಳು ಇಟ್ಟುಕೊಂಡಿರುವುದು ಗೊತ್ತಾಗಿದೆ.

ತಕ್ಷಣವೇ ಮಹಿಳೆಯನ್ನು ವಶಕ್ಕೆ ಪಡೆದು, ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಲಾಗಿದೆ. ಜೈಲು ಅಧೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ ರಿತಿಕಾ ರೈ ಮತ್ತು ಫರ್ಹಾನ್ ಖಾನ್ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ 2022 ಮತ್ತು ಬಿಎನ್‌ಎಸ್ ಸೆಕ್ಷನ್ 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

banner



[ad_2]

Source link

Leave a Reply

Your email address will not be published. Required fields are marked *