Advertisement

Condom: ಇರಾನ್ ಯುದ್ಧ ಎಫೆಕ್ಟ್ – ದೇಶದಲ್ಲಿ ಕಾಂಡೋಮ್ ದರವೂ ಭಾರೀ ಏರಿಕೆ

[ad_1]

Condom: ಇರಾನ್ ಹಾಗೂ ಸುತ್ತಮುತ್ತಲ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಕಾರಣ ಪ್ರಪಂಚದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಹಲವಾರು ದಿನ ನಿತ್ಯ ವಸ್ತುಗಳ ಅಭಾವ ಉಂಟಾಗಿದೆ. ಇದುವರೆಗೂ ತೈಲ, ಅನಿಲ ಸೇರಿದಂತೆ ಅನೇಕ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಈ ಯುದ್ಧದ ಬಿಸಿ ಕಾಂಡೊಮ್ ಗಳಿಗೂ ತಲುಪಿದೆ.

ಯಸ್, ಇರಾನ್ ಯುದ್ಧದ ಎಫೆಕ್ಟ್ ಈಗ ಕಾಂಡೋಮ್‌ಗಳ ಮೇಲೂ ಆಗಬಹುದು. ದೇಶದಲ್ಲಿ ಕಾಂಡೋಮ್‌ಗಳ ಬೆಲೆ ಶೇ. 50ರಷ್ಟು ಹೆಚ್ಚಾಗಬಹುದು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಿಮ್ಮಿಷ್ಟದ ಬ್ರ್ಯಾಂಡ್‌ಗಳು ಮಾರುಕಟ್ಟೆಯಿಂದಲೇ ಮಾಯವಾಗಬಹುದು ಎನ್ನಲಾಗಿದೆ.

ಗಲ್ಫ್ ದೇಶಗಳಲ್ಲಿ ಮಿಸೈಲ್‌ಗಳು ಬೀಳ್ತಾ ಇದ್ರೆ, ಭಾರತದಲ್ಲಿ ಕಾಂಡೋಮ್ ಯಾಕೆ ದುಬಾರಿಯಾಗುತ್ತೆ ಅಂತ ನೀವು ಯೋಚಿಸಬಹುದು. ಅದಕ್ಕೆ ಕಾರಣ ನೋಡುವುದಾದ್ರೆ ಕಾಂಡೋಮ್ ತಯಾರಿಸಲು ಬೇಕಾದ ಪ್ರಮುಖ ವಸ್ತುಗಳನ್ನು ಭಾರತ ಹೊರದೇಶಗಳಿಂದಲೇ ತರಿಸಿಕೊಳ್ಳುತ್ತದೆ. ‘ಮಿಂಟ್’ ವರದಿ ಪ್ರಕಾರ, ಕಾಂಡೋಮ್ ತಯಾರಿಸಲು ಮುಖ್ಯವಾಗಿ 6 ವಸ್ತುಗಳು ಬೇಕಾಗುತ್ತವೆ. ಯುದ್ಧದ ಕಾರಣದಿಂದ ಈ ಎಲ್ಲಾ ವಸ್ತುಗಳ ಸಪ್ಲೈ ಚೈನ್‌ನಲ್ಲಿ ಸಮಸ್ಯೆ ಆಗಿದೆ. ಇದೇ ಕಾರಣಕ್ಕೆ ಮ್ಯಾನ್‌ಕೈಂಡ್ ಫಾರ್ಮಾ (Manforce), HLL ಲೈಫ್‌ಕೇರ್ ಮತ್ತು ಕ್ಯುಪಿಡ್ ಲಿಮಿಟೆಡ್‌ನಂತಹ ದೊಡ್ಡ ಕಂಪನಿಗಳು ಕಚ್ಚಾ ವಸ್ತುಗಳ ಭಾರಿ ಕೊರತೆ ಎದುರಿಸುತ್ತಿವೆ.

The post Condom: ಇರಾನ್ ಯುದ್ಧ ಎಫೆಕ್ಟ್ – ದೇಶದಲ್ಲಿ ಕಾಂಡೋಮ್ ದರವೂ ಭಾರೀ ಏರಿಕೆ appeared first on Hosakananda.

[ad_2]

Source link

Leave a Reply

Your email address will not be published. Required fields are marked *