Advertisement

ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ ಸಂಗ್ರಹಿಸುವ ಯೋಜನೆಗೆ ಇರಾನ್‌ ಒಪ್ಪಿಗೆ – ಅಮೆರಿಕ, ಇಸ್ರೇಲ್‌ ಹಡಗುಗಳಿಗೆ ನಿಷೇಧ

[ad_1]

Hormuz Toll

ಟೆಹ್ರಾನ್‌: ಹಾರ್ಮುಜ್‌ ಜಲಸಂಧಿಯಲ್ಲಿ ಸುಂಕ (Strait Of Hormuz Tolls) ಸಂಗ್ರಹಿಸುವ ಹೊಸ ಯೋಜನೆಗೆ ಇರಾನ್‌ ಸಂಸತ್ತಿನ ಭದ್ರತಾ ಸಮಿತಿಯು ಅನುಮೋದನೆ ನೀಡಿದೆ. ಇದು ಕೆಲವು ದೇಶಗಳ ಹಡುಗಳ ಮೇಲೆ ಸುಂಕ, ಇನ್ನೂ ಕೆಲವು ದೇಶಗಳ ಹಡಗುಗಳ ಮೇಲೆ ನಿರ್ಬಂಧವನ್ನು ಹೇರಲು ಅವಕಾಶ ಮಾಡಿಕೊಡುತ್ತದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಈ ಯೋಜನೆಯು ಹಾರ್ಮುಜ್‌ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ರಿಯಾಲ್‌ (Rial) ಆಧಾರಿತ ಟೋಲ್‌ ವ್ಯವಸ್ಥೆಯನ್ನ ಪರಿಚಯಿಸುತ್ತದೆ. ಇದು ಕಡಲ ಭದ್ರತೆ, ಹಡಗುಗಳ ಸುರಕ್ಷತೆ, ಪರಿಸರ ಸಂರಕ್ಷಣೆ ಮತ್ತು ಜಲಸಂಧಿಯ ಮೂಲಕ ಹಡಗುಗಳ ಸಾಗಣೆಯನ್ನ ನಿಯಂತ್ರಿಸುವ ಹಣಕಾಸು ಕಾರ್ಯವಿಧಾನವಾಗಿದೆ. ಇದು ಇರಾನ್‌ನ ಮಿತ್ರರಾಷ್ಟ್ರಗಳಿಗಷ್ಟೇ ಅನ್ವಯವಾಗಲಿದೆ.

Iran Strait of Hormuz

ಹಡಗುಗಳಿಂದ ಸುಂಕ ಸಂಗ್ರಹ ಯೋಜನೆಯಿಂದ ಅಮೆರಿಕ ಮತ್ತು ಇಸ್ರೇಲಿ ಹಡಗುಗಳನ್ನ (US Israeli Ships) ಹೊರಗಿಡಲಾಗಿದೆ. ಏಕೆಂದ್ರೆ ಇರಾನ್‌ ಶತ್ರು ರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿಯನ್ನ ನಿಷೇಧಿಸಲಾಗಿದೆ. ಇರಾನ್‌ನ ಈ ಯೋಜನೆಯು ಹಾರ್ಮುಜ್‌ ಜಲಸಂಧಿ ನಿರ್ವಹಣೆಗೆ ಕಾನೂನು ಚೌಕಟ್ಟು ರೂಪಿಸುವ ಜೊತೆಗೆ ಅದರ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಗೆ ಒಮನ್‌ ಕೂಡ ಸಹಕಾರ ನೀಡಿದೆ.

ಇಸ್ಪಹಾನ್‌ನಲ್ಲಿ ಸರಣಿ ಸ್ಫೋಟ
ಅಮೆರಿಕ-ಇಸ್ರೇಲ್ ಇರಾನ್ ವಿರುದ್ಧ ತನ್ನ ಪ್ರತೀಕಾರ ಮುಂದುವರಿಸಿವೆ. ಇರಾನ್‌ನ ಇಸ್ಪಹಾನ್ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದೆ. ಸುಮಾರು 907 ಕೆಜಿ ಬಂಕರ್ ಬಸ್ಟರ್ ಬಾಂಬ್‌ಗಳಿಂದ ದಾಳಿ ನಡೆಸಿದೆ. ಈ ಸ್ಫೋಟದ ವೀಡಿಯೊವೊಂದನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ.

Hormuz Oil

ವರದಿಗಳ ಪ್ರಕಾರ, ಮಂಗಳವಾರ ಮುಂಜಾನೆ ಇಸ್ಫಹಾನ್ ನಗರದಲ್ಲಿ ಈ ಸ್ಫೋಟ ಸಂಭವಿಸಿದೆ. ದೃಶ್ಯಾವಳಿಗಳಲ್ಲಿ ಸರಣಿ ಸ್ಫೋಟ ಆಗಿರೋದು ಸೆರೆಯಾಗಿದೆ. ಮುಗಿಲೆತ್ತರಕ್ಕೆ ಚಿಮ್ಮುವ ಬೆಂಕಿಯಿಂದಲೇ ದಾಳಿ ತೀವ್ರತೆ ಗೊತ್ತಾಗುತ್ತೆ. ಬದ್ರ್ ಮಿಲಿಟರಿ ವಾಯುನೆಲೆಯ ನೆಲೆಯಾಗಿರುವ ಇರಾನ್ ನಗರವಾದ ಇಸ್ಫಹಾನ್‌ನಲ್ಲಿರುವ ಪ್ರಮುಖ ಶಸ್ತ್ರಾಸ್ತ್ರ ಸಂಗ್ರಹಗಾರದ ಮೇಲೆ ದಾಳಿಯಾಗಿದೆ. ಇತ್ತ ಇಸ್ರೇಲ್‌ನ ಹೈಫಾದಲ್ಲಿರುವ ತೈಲ ಸಂಸ್ಕರಣಾಗಾರವನ್ನ ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ. ದಾಳಿಯಿಂದ ಸಂಸ್ಕರಣಾಗಾರಕ್ಕೆ ಬೆಂಕಿ ಹೊತ್ತಿಕೊಂಡಿತು ಮತ್ತು ಸಂಸ್ಕರಣಾಗಾರದಿಂದ ಕಪ್ಪು ಹೊಗೆ ಮುಗಿಲೆತ್ತರಕ್ಕೆ ಆವರಿಸಿದೆ.

[ad_2]

Source link publictv.in

Leave a Reply

Your email address will not be published. Required fields are marked *