Advertisement

ಹುಬ್ಬಳ್ಳಿಯಲ್ಲಿ ವಾಣಿಜ್ಯ ಸಿಲಿಂಡರ್ ಇರಲಿ.. ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಸಹ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂಡೇನ್ ಗ್ಯಾಸ್ ಏಜೆನ್ಸಿಗಳ ಸಿಲಿಂಡರ್ ಅಭಾವ ಮುಂದುವರಿದಿದೆ.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಾಣಿಜ್ಯ ಸಿಲಿಂಡರ್ ಇರಲಿ.. ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಸಹ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂಡೇನ್ ಗ್ಯಾಸ್ ಏಜೆನ್ಸಿಗಳ ಸಿಲಿಂಡರ್ ಅಭಾವ ಮುಂದುವರಿದಿದೆ.ಬೆಳಗ್ಗೆಯಿಂದಲೇ ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು, ಏಜೆನ್ಸಿ ಹೇಳುವ ನೆಪಗಳನ್ನು ನಂಬಿ ಬರೀಗೈಯಲ್ಲಿ ವಾಪಸು ಆಗುತ್ತಿದ್ದಾರೆ.

ಗ್ಯಾಸ್ ಬುಕ್ ಕನ್ಫರ್ಮ್ ಆಗಿ ಹತ್ತು ರಿಂದ ಹದಿನೈದು ದಿನಗಳಾದ್ರೂ ಇನ್ನೂ ಸಿಲಿಂಡರ್ ಡೆಲವೆರಿ ಮಾತ್ರ ಆಗುತ್ತಿಲ್ಲ. ಹೀಗಾಗಿ ಹುಬ್ಬಳ್ಳಿ ಸೇರಿದಂತೆ ಗ್ರಾಮೀಣ ಭಾಗದ ಕಸುಗಲ್ಲ್, ಬೆಂಡಿಗೇರಿ, ಗೋಪನಕೊಪ್ಪದ ಭಾಗದ ಗ್ರಾಹಕರಿಂದ ತುಂಬಿ ಹುಬ್ಬಳ್ಳಿ ಮಧುರಾ ಕಾಲೋನಿಯ ಇಂಡೇನ್ ಗ್ಯಾಸ್ ಏಜೆನ್ಸಿ ಕಚೇರಿ ತುಂಬಿ ತುಳುಕುತ್ತಿದೆ.

ಒಂದು ಕಡೆ ಮೊಬೈಲ್ ಮೇಸಜ್ ಮತ್ತೊಂದು ಕಡೆ ಗ್ಯಾಸ್ ಬುಕ್ ಹಿಡಿದು ಸಿಬ್ಬಂದಿ ವಿರುದ್ಧ ಗ್ರಾಹಕರು ಅಸಮಾಧಾನ ಹೊರಹಾಕುತ್ತಿದ್ದಾರೆ..

Leave a Reply

Your email address will not be published. Required fields are marked *