Advertisement

ಅಪ್ಪನ ಮೇಲಿನ ಸಿಟ್ಟಿಗೆ 4ರ ಮಗುವಿನೊಂದಿಗೆ ವಿಕೃತಿ – ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿದ ಕಿರಾತಕ

[ad_1]

Mumbai Crime

ಮುಂಬೈ: ಅಪ್ಪನ ಮೇಲಿನ ಸಿಟ್ಟಿಗೆ 4 ವರ್ಷದ ಮಗುವಿನ ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿ ಕಿರಾತಕ ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ನಡೆದಿದೆ.

ಆರೋಪಿ ಸಂದೀಪ್ ಪವಾರ್ 4 ವರ್ಷದ ಮಗುವಿನೊಂದಿಗೆ ವಿಕೃತಿ ಮೆರೆದಿದ್ದಾನೆ. ಘಟನೆಯ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ:ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್‌ – ಎಷ್ಟು ಇತ್ತು? ಎಷ್ಟು ಏರಿಕೆ?

ಆರೋಪಿಯು ಮಗುವಿನ ತಂದೆಯೊಂದಿಗೆ ಜಗಳವಾಡುತ್ತಿದ್ದ. ಈ ವೇಳೆ ಬಾಲಕ ಇತರ ಮಕ್ಕಳೊಂದಿಗೆ ಆಟವಾಡುತ್ತಾ ಆಟೋದಲ್ಲಿ ಕುಳಿತಿದ್ದ. ತಂದೆಯ ಮೇಲಿನ ಸಿಟ್ಟಿನಿಂದ ಆರೋಪಿ ಆಟೋದ ಬಳಿ ಹೋಗಿ ಮಗುವಿನ ಎರಡು ಕಾಲು ಹಿಡಿದು ಎಳೆದುತಂದಿದ್ದಾನೆ. ಬಳಿಕ ಮಗುವನ್ನು ಬಟ್ಟೆ ಒಗೆದಂತೆ ತಲೆಯನ್ನು ನೆಲಕ್ಕೆ ಬಡಿದಿದ್ದಾನೆ. ಆನಂತರ ಕಟ್ಟಡದೊಳಗೆ ಹೋಗಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದಿದ್ದಾನೆ. ಕೂಡಲೇ ಮಗುವನ್ನು ಮೀರಾ ರಸ್ತೆಯಲ್ಲಿರುವ ಆಸ್ಪತ್ರೆಗೆ ರವಾನಿಸಲಾಗಿದೆ.

ಮಗುವಿನ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಟ್ರಂಪ್‌ಗೆ ಮೆಲೋನಿ ಶಾಕ್‌ – ಲ್ಯಾಂಡಿಂಗ್‌ಗೆ ಅನುಮತಿ ನೀಡದ್ದಕ್ಕೆ ಅಮೆರಿಕ ಕೆಂಡಾಮಂಡಲ


[ad_2]

Source link publictv.in

Leave a Reply

Your email address will not be published. Required fields are marked *