Advertisement

ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಇಂದಿನಿಂದ ಟೋಲ್‌ ದರ ಏರಿಕೆ; ಯಾವ ವಾಹನಕ್ಕೆ ಎಷ್ಟು?

[ad_1]

ಮಂಡ್ಯ: ಹಣಕಾಸು ವರ್ಷದ ಮೊದಲ ದಿನವೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ (Bengaluru Mysuru Expressway) ಟೋಲ್‌ ದರ ಏರಿಕೆಯಾಗಿದ್ದು, ಇದರಿಂದ ವಾಹನ ಸವಾರರಿಗೆ ಭಾರೀ ಹೊಡೆತ ಬಿದ್ದಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಕಂಡ ಬಳಿಕ ಇದೀಗ ಟೋಲ್ ದರಗಳು ಏರಿಕೆಯಾಗಿರುವುದು ವಾಹನ ಸವಾರರಿಗೆ ನುಂಗಲಾರದ ತುತ್ತಾಗಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ‌ನಲ್ಲಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಹಾಗೂ ರಾಮನಗರದ ಗಣಮಿಣಕಿ ಬಳಿ ಸೇರಿ ಎರಡು ಟೋಲ್ ಪ್ಲಾಜಾಗಳಿದ್ದು (Toll Plaza), ಈ 2 ಟೋಲ್‌ಗಳಲ್ಲೂ ದರವನ್ನು ಒಂದೇ ಮಾದರಿಯಲ್ಲಿ ಏರಿಕೆ ಮಾಡಲಾಗಿದೆ. ಪ್ರತಿ ಟೋಲ್‌ನಲ್ಲಿ 5 ರೂ. ನಿಂದ 25 ರೂ. ವರೆಗೆ ಏರಿಕೆಯಾಗಿದೆ. 118 ಕಿಮೀ ಇರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ‌ನಲ್ಲಿ ಕಾರಿನಲ್ಲಿ ಪ್ರಯಾಣ ಮಾಡಿದರೆ ಪ್ರತಿ ಟೋಲ್‌ನಲ್ಲಿ 5 ರೂ. ಎಂಬಂತೆ ಎರಡು ಟೋಲ್‌ಗಳಿಂದ 10 ರೂಪಾಯಿ ಏರಿಕೆಯಾಗಿದೆ. ಇದನ್ನೂ ಓದಿ: ಇಂದಿನಿಂದ ʻದುಬಾರಿ ದುನಿಯಾʼ; ಕರ್ನಾಟಕದಲ್ಲಿ ಯಾವುದೆಲ್ಲಾ ಏರಿಕೆ? ನಗದು ವ್ಯವಹಾರ ಹೇಗೆ..?

Bengaluru Mysuru Expressway 6

ಮೊದಲು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದರೇ 345 ರೂಪಾಯಿ ಟೋಲ್ ಕಟ್ಟಾಗುತ್ತಿತ್ತು, ಇಂದಿನಿಂದ 355 ರೂಪಾಯಿ ಟೋಲ್ ಕಟ್ಟಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಹೊರೆ ಬಿದ್ದಂತೆ ಆಗಿದೆ. ಮೊದಲೇ ಟೋಲ್ ದರ ಹೆಚ್ಚಿತ್ತು, ಈಗ ಮತ್ತಷ್ಟು ಏರಿಕೆ ಮಾಡಿದರೆ ನಾವು ಹೇಗೆ ಕಾರು ಓಡಿಸೋದು ಎಂದು ಒಂದಷ್ಟು ಚಾಲಕರು ಪ್ರಶ್ನೆ ಮಾಡ್ತಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಿನಲ್ಲಿ ನೀರಿನ ಶುಲ್ಕ 3% ಹೆಚ್ಚಳ

ಕಾರು, ವ್ಯಾನ್, ಜೀಪ್
ಹಿಂದನ ದರ: 170 ರೂ.
ಹೊಸ ದರ: 175 ರೂ.
ಏರಿಕೆ: 5 ರೂ.

ಲಘು ವಾಹನ / ಮಿನಿ ಬಸ್
ಹಿಂದನ ದರ: 275 ರೂ.
ಹೊಸ ದರ: 280 ರೂ.
ಏರಿಕೆ: 5 ರೂ.

ಟ್ರಕ್, ಬಸ್, 2 ಆಕ್ಸ್‌ಲ್ ವಾಹನ
ಹಿಂದನ ದರ: 570 ರೂ.
ಹೊಸ ದರ: 585 ರೂ.
ಏರಿಕೆ: 15 ರೂ.

3 ಆಕ್ಸ್‌ಲ್ ವಾಣಿಜ್ಯ ವಾಹನ
ಹಿಂದನ ದರ: 625 ರೂ.
ಹೊಸ ದರ: 640 ರೂ.
ಏರಿಕೆ: 15 ರೂ.

ಬಾರಿ ಕಟ್ಟಡ ನಿರ್ಮಾಣ ವಾಹನ, 4-6 ಆಕ್ಸ್‌ಲ್ ವಾಹನ
ಹಿಂದನ ದರ: 900 ರೂ.
ಹೊಸ ದರ: 920 ರೂ.
ಏರಿಕೆ: 20 ರೂ.

7 ಕ್ಕಿಂತ ಹೆಚ್ಚಿನ ಆಕ್ಸ್‌ಲ್ ವಾಹನಗಳು
ಹಿಂದನ ದರ: 1,095 ರೂ.
ಹೊಸ ದರ: 1,120 ರೂ.
ಏರಿಕೆ: 25 ರೂ.

[ad_2]

Source link publictv.in

Leave a Reply

Your email address will not be published. Required fields are marked *